ಬೆಂಗಳೂರು: ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಶ್ ಮತ್ತು ಸಚಿವ ನಾರಾಯಣ ಸ್ವಾಮಿ ಇಂದು ಆರ್ ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ
Advertisement
ಮೈ ಶುಗರ್ ಕಾರ್ಖಾನೆ ಆದಷ್ಟು ಬೇಗ ಶುರು ಮಾಡುವುದು, ಜಿಲ್ಲೆಯ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಕಲ್ಪಿಸುವುದು, ಅಕ್ರಮ ಗಣಿಗಾರಿಕೆ ತಡೆ ಹಾಗೂ ಕೆಆರ್‍ಎಸ್ ಸುತ್ತ ಮುತ್ತ ಗಣಿಗಾರಿಕೆ ನಿಯಂತ್ರಣ, ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಯಿತು.