ಬೆಂಗಳೂರು: ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಜಾತಿಗಣತಿ (Caste Census) ಗೊಂದಲದ ಬಗ್ಗೆ ಚರ್ಚೆ ಮಾಡುತ್ತೇವೆ. ನಮಗೆ ಆಗುವ ಸಮಸ್ಯೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ನಮ್ಮ ಆತಂಕದ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ತಿಳಿಸಿದ್ದಾರೆ.
ಜಾತಿಗಣತಿ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಲಿಂಗಾಯತ (Lingayats) ಮುಖಂಡರು ಸಭೆ ಮಾಡುತ್ತಿಲ್ಲ. ನಾಳೆ ಕ್ಯಾಬಿನೆಟ್ ಇದೆ, ಅಲ್ಲಿ ಚರ್ಚೆ ಮಾಡುತ್ತೇವೆ. ಶಾಮನೂರು ಶಿವಶಂಕರಪ್ಪನವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇದೆಲ್ಲವೂ ಪ್ರಾಥಮಿಕ ಹಂತದಲ್ಲಿ ಇದೆ. ಕ್ಯಾಬಿನೆಟ್ ಇದೆ, ಅಲ್ಲಿ ಚರ್ಚೆ ಆಗಲಿದೆ. ಚರ್ಚೆ ಆಗದೇ ಏನೂ ಆಗಲ್ಲ. ಚರ್ಚೆ ಆಗದೇ ಏನೂ ನಿರ್ಣಯ ಆಗಲ್ಲ. ಅನೇಕ ಸಚಿವರು ಇದ್ದಾರೆ, ನಾನು ಈಶ್ವರ್ ಖಂಡ್ರೆ ಹೀಗೆ ಅನೇಕರು ಇದ್ದಾರೆ. ನಮ್ಮ ನಿಲುವು ಆತಂಕ ಏನು ಒಳ್ಳೆಯದಾಗಿದೆ ಅದನ್ನು ಹೇಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರು ಹಿಂದೂ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಲಿಂಗಾಯತರಲ್ಲೂ ಅನೇಕ ಸಮಸ್ಯೆ ಇದೆ. ಅದು ಕಾಂತರಾಜುರಿಂದ ಅಥವಾ ಸರ್ಕಾರದಿಂದ ಆಗಿದೆ ಎಂದು ಹೇಳಲ್ಲ. ಲಿಂಗಾಯತದ ಅನೇಕ ಉಪಪಂಗಡಗಳು ಇವೆ. ಮೀಸಲಾತಿ ಸಿಗುತ್ತದೆ ಎಂದು ಅವರು ಬೇರೆ ಬರೆಸಿದ್ದಾರೆ. ಅದನ್ನ ಹೇಗೆ ಬಗೆಹರಿಸಬೇಕು ಎಂದು ನೋಡುತ್ತೇವೆ. ಆ ಉಪಪಂಗಡ ಸೇರಿದರೆ ಜಾಸ್ತಿಯೇ ಆಗುತ್ತದೆ. ಟೆಕ್ನಿಕಲಿ ಸಮಸ್ಯೆ ಇದ್ದಾವೆ, ಅದೇನು ಸರಳ ಇಲ್ಲ. ಮೀಸಲಾತಿ ಬಿಡಿ ಎಂದು ಉಪಪಂಗಡಗಳಿಗೆ ಹೇಳಲು ಆಗಲ್ಲ. ಅದನ್ನು ಅವರು ಬಿಡೋದು ಇಲ್ಲ. ಅವರ ಮಕ್ಕಳಿಗೆ ಮೀಸಲಾತಿ ಸಿಗುತ್ತದೆ ಅಂತ ನಾವು ಟೀಕೆ ಟಿಪ್ಪಣಿ ಮಾಡಿದರೆ ಸರಿಯಲ್ಲ. ಕಾಂತರಾಜು ಮಾಡಿರೋದೆ ಇಷ್ಟು. ಸಮುದಾಯ ಗಣತಿ ಮಾಡಿ ಏನು ಪ್ರಯೋಜನ. 99% ಕ್ಯಾಬಿನೆಟ್‌ನಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು. ಇದನ್ನೂ ಓದಿ: ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ
ನಮ್ಮ ಸಮಸ್ಯೆ ವಿಭಿನ್ನವಾಗಿದೆ, ಹಾಗಾಗಿ ಇಲ್ಲೇ ಬಗೆಹರಿಸಬೇಕಾಗುತ್ತದೆ. ನಾವು ಲಿಂಗಾಯತರು ಬಸವ ತತ್ವದವರು. ಬೇರೆ ಸಮುದಾಯ ಅವರವರು ಸಭೆ ಮಾಡಿಕೊಳ್ಳುತ್ತಾರೆ. ನಾವು ಯಾರಿಗೂ ಸಮಸ್ಯೆ ಆಗಲಿ ಎಂದು ಮಾತಾಡಲ್ಲ. ನಮಗೆ ಸಮಸ್ಯೆ ಆಗೋದನ್ನು ನಾವು ಹೇಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು, ಆದ್ರೆ 180 ಜಾತಿ ಸೇರಿಸಿದ್ದಾರೆ: ಮಾದಾರ ಚೆನ್ನಯ್ಯ ಸ್ವಾಮೀಜಿ