ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರ ಬದಲಾವಣೆಗೆ ಆಗ್ರಹ ಕೇಳಿ ಬರುತ್ತಿರುವ ಹೊತ್ತಲ್ಲೇ ಕೇಂದ್ರ ಸಚಿವ, ಹಿರಿಯ ನಾಯಕ ವಿ.ಸೋಮಣ್ಣ (V Somanna) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ತುಮಕೂರು ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆ ವಿಚಾರದ ನೆಪದಲ್ಲಿ ಸಂಸತ್‌ನಲ್ಲಿರುವ ಅಮಿತ್ ಶಾ ಕಚೇರಿಯಲ್ಲಿ ಭೇಟಿಯಾಗಿರುವ ವಿ.ಸೋಮಣ್ಣ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿಗೆ ‘ಡ್ರಗ್ಸ್’ ಸಂಕಷ್ಟ – ಸುಪ್ರೀಂಗೆ ಮೇಲ್ಮನವಿಗೆ ಪೊಲೀಸರ ಸಿದ್ಧತೆ
ಸೋಮವಾರಷ್ಟೇ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಗುಂಪು ಗೃಹಪ್ರವೇಶ ಪೂಜೆ ನೆಪದಲ್ಲಿ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಇದರ ಬೆನ್ನಲ್ಲೇ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಲಿಂಗಾಯತ ನಾಯಕರು ವಿ.ಸೋಮಣ್ಣ ನಿವಾಸದಲ್ಲಿ ಸಭೆ ನಡೆಸಿದ್ದರು. ಇದನ್ನೂ ಓದಿ: ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ
ಈ ಸರಣಿ ಸಭೆಗಳ ಬೆನ್ನಲ್ಲೇ ವಿ.ಸೋಮಣ್ಣ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ರಾಜ್ಯದಲ್ಲಿ ಅಧ್ಯಕ್ಷರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆ ಹಾಗೂ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿರುವ ವಿಚಾರ ಹಾಗೂ ಬಿ.ವೈ ವಿಜಯೇಂದ್ರ ವರ್ತನೆಯ ಬಗ್ಗೆ ಹಿರಿಯ ನಾಯಕರಿಗಿರುವ ಅಸಮಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್
ಬಿ.ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ವಿರೋಧ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ ಲಿಂಗಾಯತ ನಾಯಕರ ವಲಯದಲ್ಲಿ ಕಿಡಿ ಹೊತ್ತಿರುವ ಬಗ್ಗೆ ವಿ.ಸೋಮಣ್ಣ ವಿವರಿಸಿದ್ದಾರೆ. ಇದೇ ವೇಳೆ ತಾವು ರಾಜ್ಯಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸೋಮಣ್ಣ ಮಾತು ಆಲಿಸಿರುವ ಅಮಿತ್ ಶಾ ಸೂಕ್ತ ನಿರ್ಧಾರದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ


