ಬೆಂಗಳೂರು: ಸಚಿವರ ಉತ್ತರ ಬೇಕು ಅನ್ನೋ ವಿಧಾನ ಮಂಡಲದ ಸದನದಲ್ಲಿ ಸಚಿವರ ಉತ್ತರ ಸಾಕು ಎಂಬ ಮಾತು ಕೇಳಿ ಬಂದ ಪ್ರಸಂಗ ಇಂದು ವಿಧಾನ ಪರಿಷತ್‍ನಲ್ಲಿ (Vidhan Parishad) ನಡೆಯಿತು.
Advertisement
Advertisement
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ (Shivaram Hebbar) ಉತ್ತರಕ್ಕೆ ಪರಿಷತ್ ಸದಸ್ಯರೇ ಸುಸ್ತಾದರು. ಸಭಾಪತಿಗಳು, ಸದಸ್ಯರು ನಿಮ್ಮ ಉತ್ತರ ಸಾಕು ಎಂದರೂ ಬಿಡದೇ ಉತ್ತರ ನೀಡಿದ ಪ್ರಸಂಗ ನಡೆಯಿತು. ಇನ್ಯಾವತ್ತೂ ಕಾರ್ಮಿಕ ಇಲಾಖೆ (Labor Department) ಸಚಿವರಿಗೆ ಸದಸ್ಯರು ಪ್ರಶ್ನೆ ಹಾಕಲ್ಲ ಅಂತ ಹಾಸ್ಯನೂ ಮಾಡಲಾಯಿತು. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ- ಹೆಡ್ ಲೈಟ್‌ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಲಾಯಿಸಿದರೆ ಕೇಸ್: ಶ್ರೀರಾಮುಲು
Advertisement
Advertisement
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸಲೀಂ ಅಹಮದ್ (Salim Ahmed) ಬದಲಾಗಿ ಸದಸ್ಯ ಗೋವಿಂದ ರಾಜು (Govind Raju) ಉಪ ಪ್ರಶ್ನೆ ಕೇಳಿದರು. ಈ ವೇಳೆ ಉತ್ತರ ಕೊಡಲು ಸಚಿವ ಶಿವರಾಮ್ ಹೆಬ್ಬಾರ್ ನಿಂತರು. ಕಾರ್ಮಿಕ ಇಲಾಖೆಯಲ್ಲಿ ಜಾರಿ ಮಾಡಿದ ಹೊಸ ಹೊಸ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ವಿವರವಾದ ಉತ್ತರ ಕೊಡುತ್ತಿದ್ದರು.
ಇಡೀ ಇಲಾಖೆಯ ಕೆಲಸ ಹೇಳಲು ಹೆಬ್ಬಾರ್ ಮುಂದಾದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಭಾಪತಿ ಮಲ್ಕಾಪುರೆ (Malkapure), ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಾ ಉತ್ತರ ಸಾಕು ಬಿಡಿ ಎಂದರು. ಬಳಿಕ ಗೋವಿಂದ ರಾಜು, ನಾನು ಕೇಳಿದ್ದಕ್ಕಿಂತ ಹೆಚ್ಚು ಉತ್ತರ ಕೊಡುತ್ತಿದ್ದಾರೆ ಸಾಕು ಬಿಡಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 2-3 ತಿಂಗಳಲ್ಲಿ ಭಿಕ್ಷಾಟನೆ ತಡೆಗೆ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ
ಇದಕ್ಕೂ ನಿಲ್ಲಿಸದ ಸಚಿವರು ಉತ್ತರ ಮುಂದುವರೆಸಿದರು. ಬಳಿಕ ಜೆಡಿಎಸ್ (JDS) ಸದಸ್ಯ ಭೋಜೇಗೌಡ, ಇನ್ಯಾವತ್ತು ಕಾರ್ಮಿಕ ಇಲಾಖೆ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಬಿಡಿ ಎಂದು ಹಾಸ್ಯ ಮಾಡಿದರು. ಭೋಜೇಗೌಡರ (Bhoje Gowda) ಮಾತಿಗೆ ನಗೆ ಗಡಲಲ್ಲಿ ಸದನ ತೇಲಾಡಿತು. ಬಳಿಕ ಸುದೀರ್ಘ ಉತ್ತರ ಕೊಟ್ಟ ಸಚಿವರು ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ ಅಂತ ಉತ್ತರ ಮುಗಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಅಭಿನಂದನೆ ಸಲ್ಲಿಸಿದರು.