ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code for Gvt School Teachers) ಜಾರಿಗೆ ತರುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Banagarappa) ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ ಕಾಂಗ್ರೆಸ್‍ನ ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು.
Advertisement
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಡ್ರೆಸ್ ಜಾರಿ ಮಾಡಲು ಸರ್ಕಾರ ಕ್ರಮವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರಲ್ಲಿ 1200 ಹುದ್ದೆ ಖಾಲಿ ಇದೆ. ಇವುಗಳನ್ನ ತುಂಬಬೇಕು. ಹೈಸ್ಕೂಲ್ ನಲ್ಲಿ ಕ್ಲರ್ಕ್ ಹುದ್ದೆ ಖಾಲಿ ಇರೋದ್ರಿಂದ ಮುಖ್ಯ ಶಿಕ್ಷಕರಿಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಖಾಲಿ ಇರೋ ಕ್ಲರ್ಕ್ ಹುದ್ದೆ ಭರ್ತಿ ಮಾಡಬೇಕು ಅಂತ ಮಂಜುನಾಥ ಭಂಡಾರಿ (Manjunath Bhandary) ಒತ್ತಾಯ ಮಾಡಿದರು.
Advertisement
Advertisement
ಇದಕ್ಕೆ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಕರಿಗೆ ಡ್ರೆಸ್‍ಕೋಡ್ ಜಾರಿ ಮಾಡೋ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದರು. ಈಗಾಗಲೇ ಶಾಲೆಗಳಿಗೆ ಸಮವಸ್ತ್ರ 83% ತಲುಪಿದೆ. ಉಳಿದ ಸಮವಸ್ತ್ರ ಬೇಗ ತಲುಪಿಸುತ್ತೇವೆ. ಖಾಲಿ ಇರೋ ವಿಶೇಷ ಶಿಕ್ಷಕರ ಹುದ್ದೆ ಭರ್ತಿ ಮಾಡ್ತೀವಿ. ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ. ಹೈಸ್ಕೂಲ್ ನಲ್ಲಿ ಕ್ಲರ್ಕ್ ಪೋಸ್ಟ್ ಕೊಡಲಾಗಿದೆ. ಖಾಲಿ ಇರೋ ಕ್ಲರ್ಕ್ ಪೋಸ್ಟ್ ಬೇಗ ತುಂಬಲು ಕ್ರಮವಹಿಸುತ್ತೇವೆ ಎಂದರು.
Advertisement
Web Stories