ದಾವಣಗೆರೆ: ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಭಾನುವಾರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಾವಣಗೆರೆಯ (Davanagere) ಹರಿಹರದಲ್ಲಿ ನಡೆದಿತ್ತು. ಇದೀಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ (Discharged) ಆಗಿರುವ ಲೇಖಕರು ಆರೋಗ್ಯವಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಡಿಸ್ಚಾರ್ಜ್ ಬಳಿಕ ನಗರದಲ್ಲಿ ಮಾತನಾಡಿದ ಅವರು, ಕವಿಗೋಷ್ಠಿ ಉದ್ಘಾಟನೆ ನಂತರ ಸಭಾಂಗಣದ ಹೊರಗೆ ಪೋಸ್ಟರ್ ಬಿಡುಗಡೆ ಮಾಡಲು ಹೋಗಿದ್ದೆ. ಎಸ್‌ಸಿ, ಎಸ್‌ಟಿ ಸ್ಪರ್ಧಾ ಪರೀಕ್ಷೆಗೆ ಪೋಸ್ಟರ್ ಬಿಡುಗಡೆ ಮಾಡಿದ್ದೆವು. ಆಗ ತಲೆ ಸುತ್ತು ಬಂದಂತಾಯಿತು. ತಕ್ಷಣ ಹೋಗಿ ಕಾರಿನಲ್ಲಿ ಕುಳಿತುಕೊಂಡೆ. ಬಳಿಕ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ನನಗೆ ಕೆಲ ನಿಮಿಷಗಳ ಕಾಲ ಪ್ರಜ್ಞೆ ಇರಲಿಲ್ಲ ಎಂದು ಘಟನೆ ಬಗ್ಗೆ ವಿವರಿಸಿದರು.
Advertisement
Advertisement
ನನಗೆ ಬಿಪಿ, ಶುಗರ್ ಇಲ್ಲ. ಆದರೆ ಇದೆಲ್ಲಾ ಆಗಿರುವ ಹಿನ್ನೆಲೆ ವೈದ್ಯರು ಇಸಿಜಿ ಬಿಪಿ ಶುಗರ್ ಟೆಸ್ಟ್ ಮಾಡಿದ್ದಾರೆ. ಹೆಚ್ಚು ಒತ್ತಡದಿಂದ ಈ ರೀತಿಯಾಗುತ್ತದೆ ಎಂದು ಹೇಳಿದ್ದಾರೆ. ವೈದ್ಯರು ಡ್ರಿಪ್ಸ್ ಹಾಕಿದ್ರು, ನಾನು ವಿಶ್ರಾಂತಿ ಪಡೆದು ಈಗ ಡಿಸ್ಚಾರ್ಚ್ ಆಗಿದ್ದೇನೆ. ಡಿಸ್ಚಾರ್ಜ್ ಆಗುವ ಮುನ್ನವೂ ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: IAF Jets Crashː ವಾಯುಸೇನಾ ವಿಮಾನಗಳು ಪತನ – ಬ್ಲ್ಯಾಕ್ ಬಾಕ್ಸ್ ಪತ್ತೆ
Advertisement
ನಾನು ಕುಸಿದಿದ್ದ ಕ್ಷಣ ಸ್ನೇಹಿತರಲ್ಲಿ ಆತಂಕ ಹುಟ್ಟಿದ್ದು ನಿಜ. ನನ್ನ ಕಾಳಜಿ ವಹಿಸಿದ ಸ್ನೇಹಿತರಿಗೂ, ಮಾಧ್ಯಮ ಮಿತ್ರರಿಗೂ ಧನ್ಯವಾದಗಳು. ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ನಾನು ಬೆಂಗಳೂರಿಗೆ ಹೋದ ಮೇಲೆ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತೇನೆ. ವೈದ್ಯರು ವಿಶ್ರಾಂತಿ ಬೇಕು ಎಂದಿದ್ದಾರೆ, ಅದರಂತೆ ಪಾಲಿಸುತ್ತೇನೆ ಎಂದರು. ಇದನ್ನೂ ಓದಿ: ದೇವರಿಗೆ ನಾಲಿಗೆಯನ್ನೇ ಕತ್ತರಿಸಿ ದಾನ ಕೊಟ್ಟ ಭೂಪ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k