Advertisements

ವಿರಾಟ್ ಕೊಹ್ಲಿಯನ್ನು ನೋಡಿ ನಿರಾಸೆಯಾಗಿದೆ : ರಣವೀರ್ ಸಿಂಗ್

ಮುಂಬೈ: ಐಪಿಎಲ್ 2022ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಗ್ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಹೇಳಿಕೆ ನೀಡಿ, ವಿರಾಟ್ ಕೊಹ್ಲಿಯನ್ನು ನೋಡಿ ನಿರಾಸೆಯಾಗಿದೆ ಎಂದಿದ್ದಾರೆ.

Advertisements

ಭಾನುವಾರ ನಡೆದ ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಡಕ್ ಔಟಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ.

Advertisements

ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ಎಸ್‍ಆರ್‌ಹೆಚ್ ನಡುವಿನ ಪಂದ್ಯದ ವೇಳೆ ಹಾಜರಿದ್ದ ನಟ ರಣವೀರ್ ಸಿಂಗ್ ಮಾತನಾಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾಗೆ ಅವರ ಅಗತ್ಯವಿರುವುದರಿಂದ ಕೊಹ್ಲಿ ಅವರು ಶೀಘ್ರದಲ್ಲೇ ತಮ್ಮ ಫಾರ್ಮ್‍ಗೆ ಮರಳುತ್ತಾರೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರಾಟ್ ಅವರು ಮೊದಲ ಬಾಲ್‍ನಲ್ಲಿ ಡಕ್‍ನಲ್ಲಿ ಔಟಾಗುವುದನ್ನು ನೋಡಲು ಸಾಕಷ್ಟು ನಿರಾಸೆಯಾಗಿದೆ. ಆದರೆ ಇದು ಅವರ ವರ್ಚಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ಯಾವಾಗಲೂ ಶ್ರೇಷ್ಠ ಕ್ರಿಕೆಟಿಗರಾಗಿರುತ್ತಾರೆ. ಅವರು ಶೀಘ್ರದಲ್ಲೇ ತಮ್ಮ ಕಳಪೆ ಫಾರ್ಮ್‍ನಿಂದ ಹೊರಬರುತ್ತಾರೆ. ಏಕೆಂದರೆ ಅವರು ಟಿ-20 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾಗೆ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾನು ನೋಡಲು ಬಯಸುತ್ತೇನೆ ಎಂದರು.

Advertisements

ಆರ್‌ಸಿಬಿ ಶುಕ್ರವಾರದಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

Advertisements
Exit mobile version