ನವದೆಹಲಿ: ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G 20 summit 2023) ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ (Xi Jinping) ಭಾಗವಹಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡೆನ್ (Joe Biden) ಹೇಳಿದ್ದಾರೆ. ನಾನು ಅವರನ್ನು ನೋಡಲು ಭಾರತಕ್ಕೆ ಹೊಗುತ್ತಿದ್ದೇನೆ, ಅವರ ಅನುಪಸ್ಥಿತಿ ತೀವ್ರ ನಿರಾಶೆಗೊಳಿಸಿದೆ ಎಂದರು.
Advertisement
ಡೆಲವೇರ್ ನ ರೆಹೋಬೋತ್ ಬೀಚ್‍ನಲ್ಲಿ ಮಾತನಾಡಿದ ಅವರು, ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವರು ಬಾರದಿರುವುದು ನನಗೆ ತೀವ್ರ ಬೇಸರವಾಗಿದೆ. ಇದೇ ವೇಳೆ ಏಷ್ಯಾದಲ್ಲಿ (Asia) ಅಮೆರಿಕಾದ (America) ಸಂಬಂಧಗಳನ್ನು ಬಲಪಡಿಸಲು ವಿಯೆಟ್ನಾಂಗೆ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ – ಇಸ್ರೋದಿಂದ ವೀಡಿಯೋ ರಿಲೀಸ್
Advertisement
Advertisement
ಭಾರತ ಮತ್ತು ವಿಯೆಟ್ನಾಂ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ಹೆಚ್ಚು ನಿಕಟ ಸಂಬಂಧಗಳನ್ನು ಬಯಸುತ್ತಾರೆ ಮತ್ತು ಅದು ತುಂಬಾ ಸಹಾಯಕವಾಗಬಹುದು ಎಂದು ಬೈಡೆನ್ ಹೇಳಿದರು. ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬೀಜಿಂಗ್ ಅನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
Advertisement
Web Stories