ಬ್ಯಾಂಕಾಕ್: ಅಂಗವಿಕಲ ನಾಯಿಯೊಂದು ಅಪ್ರಾಪ್ತ ತಾಯಿಯೊಬ್ಬಳು ಮಣ್ಣಿನಲ್ಲಿ ಹೂತಿಡಲಾಗಿದ್ದ ಜೀವಂತ ನವಜಾತ ಶಿಶುವಿನ ಪ್ರಾಣವನ್ನು ಕಾಪಾಡಿರುವ ಘಟನೆ ಥೈಲ್ಯಾಂಡ್‍ನ ನಾಖೋನ್ ರಾಟ್‍ಛಾಸಿಮಾ ಎಂಬ ಗ್ರಾಮದಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತೆ ತಾನು ಗರ್ಭಿಣಿಯಾಗಿರುವ ವಿಚಾರವನ್ನು ತನ್ನ ಪೋಷಕರಿಂದ ಮುಚ್ಚಿಡಲು ಈ ರೀತಿ ಮಾಡಿದ್ದು, ಮಗುವನ್ನು ನಾಖೋನ್ ರಾಟ್‍ಛಾಸಿಮಾ ಪ್ರದೇಶದ ತೋಟವೊಂದರಲ್ಲಿ ಹೂತಿಟ್ಟು ಹೋಗಿದ್ದಾಳೆ. ಆಗ ಪಿಂಗ್ ಪಾಂಗ್ ಹೆಸರಿನ ನಾಯಿಯೊಂದು ಮಗುವಿನ ವಾಸನೆ ಗ್ರಹಿಸಿ ತಕ್ಷಣ ಮಣ್ಣನ್ನು ಕೆರೆದು ತೆಗೆಯಲು ಆರಂಭಿಸಿದೆ.
Advertisement
Advertisement
ಇತ್ತ ಪಿಂಗ್ ಪಾಂಗ್‍ನ ಮಾಲೀಕ ನಾಯಿ ಏಕೆ ರೀತಿ ಮಣ್ಣು ಅಗೆಯುತ್ತಿದೆ ಎಂದು ಹತ್ತಿರ ಹೋಗಿ ನೋಡಿದ್ದಾರೆ. ಆಗ ಮಗುವಿನ ಕಾಲು ಕಾಣಿಸಿಕೊಂಡಿದೆ. ತಕ್ಷಣ ಮಗುವನ್ನು ಹೊರ ತೆಗೆದಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲ ಸೇರಿಕೊಂಡು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ದೇಹವನ್ನು ಸ್ವಚ್ಛಮಾಡಿ ಪರೀಕ್ಷೆ ನಡೆಸಿ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
Advertisement
ನಾಯಿಯ ಬಗ್ಗೆ ಮಾತನಾಡಿದ ಮಾಲೀಕ, ಕಾರು ಡಿಕ್ಕಿ ಹೊಡೆದ ಬಳಿಕ ಪಿಂಗ್ ಪಾಂಗ್ ಗೆ ಒಂದು ಕಾಲಿನ ಸ್ವಾಧೀನ ಕಳೆದುಕೊಂಡಿದೆ. ಅದು ಹುಟ್ಟಿದಾಗಿನಿಂದ ನಾನೇ ಸಾಕಿ ಬೆಳೆಸಿದ್ದೇನೆ. ನಾನು ಹಸುಗಳನ್ನು ಕರೆದುಕೊಂಡು ತೋಟಕ್ಕೆ ಹೋದಾಗ ನನಗೆ ಯಾವಾಗಲೂ ಸಹಾಯ ಮಾಡುತ್ತದೆ. ತುಂಬಾ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇಡೀ ಗ್ರಾಮದವರು ನಾಯಿಯನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ.
Advertisement
ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ತಾಯಿ ತಾನೇ ಮಗುವನ್ನು ಹೂತಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ತಾನೂ ಗರ್ಭಿಣಿಯಾಗಿರುವುದು ತಂದೆಗೆ ಗೊತ್ತಾದರೆ ಹೊಡೆಯುತ್ತಾರೆ ಎಂಬ ಭಯದಿಂದ ಈ ರೀತಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ಅಪ್ರಾಪ್ತೆ ಪೋಷಕರ ಆರೈಕೆಯಲ್ಲಿದ್ದು, ಮಗುವನ್ನು ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪನುವಾತ್ ಪುಟ್ಟಕಮ್ ತಿಳಿಸಿದ್ದಾರೆ. ಸಾಯುತ್ತಿದ್ದ ನವಜಾತ ಶಿಶುವನ್ನು ಕಾಪಾಡಿದ್ದರಿಂದ ಪಿಂಗ್ ಪಾಂಗ್ಗೆ ಈಗ ಹೀರೋ ಪಟ್ಟ ಸಿಕ್ಕಿದೆ.