‘ಕರಿಮಣಿ’ (Karimani), ‘ಗಂಗೆ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಾಳೆ (Vinod Dondale) ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.
ನಾಗರಭಾವಿಯಲ್ಲಿರುವ ನಿವಾಸದಲ್ಲಿ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಸಿನಿಮಾ ಟಿಕೆಟ್, ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಪ್ಲ್ಯಾನ್!
ಅಂದಹಾಗೆ, ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.
ವಿನೋದ್ ದೊಂಡಾಳೆ ಅವರು ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.