ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ ಹಿರಿಯ ನಟ ದತ್ತಣ್ಣ ಅತಿಥಿಯಾಗಿ ಆಗಮಿಸಿದ್ದಾರೆ. ಬಾಲ್ಯ, ಶಿಕ್ಷಣ, ಸೇನೆಯಲ್ಲಿ ಸೇವೆ, ರಂಗಭೂಮಿ, ಸಿನಿಮಾ ಜರ್ನಿ ಹೀಗೆ ಸಾಕಷ್ಟು ವಿಚಾರಗಳನ್ನ ನಿರೂಪಕ-ನಟ ರಮೇಶ್ ಅರವಿಂದ್ ಜೊತೆ ಹಂಚಿಕೊಂಡಿದ್ದಾರೆ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಈ ಚಿತ್ರವೊಂದು ಕಪ್ಪು ಚುಕ್ಕೆ ಎಂದು ನಿರ್ದೇಶಕರೊಬ್ಬರನ್ನು ಬಾಯಿ ಬಂದಂತೆ ಬೈದಿದರಂತೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ದತ್ತಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಪತ್ನಿ, ಪುತ್ರನ ಜೊತೆ ವಿನೋದ್ ರಾಜ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ
Advertisement
ಹಿರಿಯ ನಟ ದತ್ತಣ್ಣ ಅವರು ಕನ್ನಡ, ಹಿಂದಿ, ತೆಲುಗು, ಮತ್ತು ಮಲಯಾಳಂ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಗೆ ಬಗೆಯ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಇದೀಗ ವೀಕೆಂಡ್ ಟೆಂಟ್‌ನಲ್ಲಿ ‘ನೀರ್‌ದೋಸೆ’ (Neerdose Film) ಚಿತ್ರದ ಬಗ್ಗೆ ದತ್ತಣ್ಣ ಮೌನ ಮುರಿದಿದ್ದಾರೆ. ನೀರ್‌ದೋಸೆಯಲ್ಲಿ ದತ್ತಾತ್ರೆಯ ಹೆಸರಿನ ಪೋಲಿ ತಾತನ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ವಿಜಯ ಪ್ರಸಾದ್, ಆ ಕತೆಯನ್ನು ಹೇಳಿದಾಗ ಕತೆ ಚೆನ್ನಾಗಿದೆ ಆದರೆ ಸಂಭಾಷಣೆ ಚೆನ್ನಾಗಿಲ್ಲ, ಜಾಸ್ತಿ ಪೋಲಿ ಸಂಭಾಷಣೆಗಳಾದವು ಬೇಡ ಎಂದಿದ್ದರಂತೆ. ಈವರೆಗೆ ಬಹಳ ಗಂಭೀರ ಪಾತ್ರಗಳನ್ನು ಮಾಡಿದ್ದೀರಿ ಈಗ ಈ ಪಾತ್ರ ಮಾಡಿಬಿಡಿ ಎಂದು ವಿಜಯ ಪ್ರಸಾದ್ (Vijay Prasad) ಮನವಿ ಮಾಡಿದ್ದರು. ಅವರ ಪ್ರೀತಿಗೆ ಕಟ್ಟುಬಿದ್ದು ಸಿನಿಮಾದಲ್ಲಿ ದತ್ತಣ್ಣ ನಟಿಸಿದರು.
Advertisement
Advertisement
ಬಳಿಕ ಚಿತ್ರದ ಟ್ರೈಲರ್ ನೋಡಿ ಉರಿದು ಹೋದ ನಟ ದತ್ತಣ್ಣ, ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಬೈದಿದರಂತೆ. ನನ್ನ ಜೀವನದಲ್ಲಿ ಇದೊಂದು ಸಿನಿಮಾ ಕಪ್ಪು ಚುಕ್ಕೆ ಎಂದು ಬಿಟ್ಟರಂತೆ. ವಿಜಯ ಪ್ರಸಾದ್ ಜೊತೆ ಮಾತು ನಿಲ್ಲಿಸಿಬಿಟ್ಟಿದ್ದರಂತೆ. ಮುಂದೆ ಚಿತ್ರ ರಿಲೀಸ್ ವೇಳೆಗೆ ವಿಜಯ್ ಪ್ರಸಾದ್ ಮನವಿಯ ಮೇರೆಗೆ Neerdose ಸಿನಿಮಾವನ್ನ ದತ್ತಣ್ಣ ನೋಡಿದ ಬಳಿಕ ಅವರ ಕೋಪ ಇಳಿಯಿತಂತೆ.
Advertisement
ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿರ್ದೇಶಕ ವಿಜಯ ಪ್ರಸಾದ್, ದತ್ತಣ್ಣ ಬಗ್ಗೆ ಮಾತನಾಡುತ್ತಾ, ಎಲ್ಲರೊಟ್ಟಿಗೂ ಬೆರೆಯುವ ದತ್ತಣ್ಣ ಅವರು, ಶೂಟಿಂಗ್ ಮುಗಿದ ಮೇಲೆ ನಮ್ಮೊಟ್ಟಿಗೆ ಕೂತು ಗುಂಡು ಹಾಕುತ್ತಾ ನಮ್ಮೊಡನೆ ಬೆರೆತುಬಿಡುತ್ತಾರೆ. ದತ್ತಣ್ಣ ಬ್ಯಾಗ್ ಇಲ್ಲದೆ ಎಲ್ಲಿಗೂ ಬರೊಲ್ಲ ಗುಂಡಿನ ವ್ಯವಸ್ಥೆ ಇಲ್ಲದೆ ಎಲ್ಲಿಯೂ ಉಳಿಯುವುದಿಲ್ಲ ಎಂದು ಜೋಕ್ (Joke) ಮಾಡಿದರು.