ಕನ್ನಡದ ಪ್ರತಿಭಾವಂತ ನಿರ್ದೇಶಕ (Director) ವಿಜಯ್ ಪ್ರಸಾದ್ (Vijay Prasad) ‘ಪೆಟ್ರೊಮ್ಯಾಕ್ಸ್’ ಸಿನಿಮಾ ನಂತರ ಮತ್ತೊಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಈ ಬಾರಿ ಅವರು ಮಹಿಳಾ ಪ್ರಧಾನ (Female lead) ಸಿನಿಮಾವನ್ನು ಮಾಡಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ನಾಯಕನಷ್ಟೇ ನಾಯಕಿಗೂ ಪ್ರಧಾನ್ಯತೆ ಇದ್ದರೂ, ಈ ಸಿನಿಮಾ ನಾಯಕಿಗೆ ಮತ್ತಷ್ಟು ಜವಾಬ್ದಾರಿ ನೀಡಲಿದೆಯಂತೆ.
ಹೊಸ ಸಿನಿಮಾದ (New Movie) ಕುರಿತಾಗಿ ತಮ್ಮ ಬೇಸರವನ್ನು ಹೊರ ಹಾಕಿರುವ ಅವರು, ‘ಮೂರು ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಮಾತುಕತೆ ಮುಗಿಸಿದೆ (ಹೆಸರು ಬೇಡ). ಯಾರೊಬ್ಬರೂ ಕಥೆ ಕೇಳಲಿಲ್ಲ. ಕೇಳಿದ್ದು ಎರಡೇ, ಒಂದು ಡಬ್ಬಲ್ ಮೀನಿಂಗ್ ಡೈಲಾಗ್, ಇನ್ನೊಂದು ಅವರೇ ನಾಯಕ ಆಗಬಹುದೇ ಎಂದು. ಆದರೆ, ಈ ಬಾರಿ ನನ್ನ ಪ್ರಯಾಣವೇ ಬೇರೆ. ಕಾರಣ ನಾಯಕಿಯೇ ಚಿತ್ರದ ಜೀವಾಳ. ಹಿಂದಿನ ನಿರಾಸೆಗೆ ಕ್ಷಮೆ ಇರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್
ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ 2 ಸಿನಿಮಾ ರಿಲೀಸ್ ಗೆ ರೆಡಿಯಿದೆ. ಪರಿಮಳ ಲಾಡ್ಜ್ ಹೆಸರಿನ ಸಿನಿಮಾವನ್ನೂ ಅವರು ಘೋಷಣೆ ಮಾಡಿದ್ದರು. ಪರಿಮಳ ಲಾಡ್ಜ್ ಗಿಂತ ಮುಂಚೆ ಈ ಹೊಸ ಸಿನಿಮಾ ಸೆಟ್ಟೇರಲಿದೆಯಂತೆ. ಅಗಸ್ಟ್ ನಿಂದ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ.
ನಾಯಕಿ ಪ್ರಧಾನ ಸಿನಿಮಾವಾಗಿದ್ದರಿಂದ ಹೊಸ ನಾಯಕಿಯೊಂದಿಗೆ ಸಿನಿಮಾ ಶುರು ಮಾಡುತ್ತಾರಾ ಅಥವಾ ಹೆಸರಾಂತ ನಟಿಯೊಂದಿಗೆ ಸಿನಿಮಾ ಮಾಡುತ್ತಾರಾ ಎನ್ನುವ ಕುರಿತು ಅವರು ಏನೂ ಹೇಳಿಲ್ಲ. ನಿರ್ಮಾಪಕರು ಸಿಕ್ಕ ನಂತರ ಬಹುಶಃ ಎಲ್ಲದಕ್ಕೂ ಸ್ಪಷ್ಟತೆ ಸಿಗಬಹುದು.