ನಟ ಡಾ.ವಿಷ್ಣುವರ್ಧನ್ (Dr. Vishnuvardhan) ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಕರ್ (V.R Bhaskar) ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ (Passed away). ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ವಿಷ್ಣುವರ್ಧನ್ ಅವರಿಗೆ ಸಹಾಯಕರಾಗುವುದರ ಜೊತೆಗೆ ತೀರಾ ಆತ್ಮೀಯರೂ ಆಗಿದ್ದರು. ಈ ಒಡನಾಟವೇ ಅವರನ್ನು ನಟರನ್ನಾಗಿ, ನಿರ್ದೇಶಕರನ್ನಾಗಿ ಮತ್ತು ಬರಹಗಾರರನ್ನಾಗಿ ಮಾಡಿತ್ತು. ಇತ್ತೀಚೆಗಷ್ಟೇ ಅವರು ಮಗನ ಬಗ್ಗೆ ವಿಡಿಯೋವೊಂದನ್ನು ಮಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ನಂತರ ಮಗನನ್ನು ಮತ್ತು ಪತ್ನಿಯನ್ನೂ ಕಳೆದುಕೊಂಡರು. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ
ರುದ್ರ ನಾಗ, ಕರ್ತವ್ಯ, ನನ್ನ ಶತ್ರು ಪೊಲೀಸ್ ಮತ್ತು ದಾದಾ, ರುದ್ರ ವೀಣೆ, ದಾದಾ, ಆರಾಧನೆ, ಕರುಳಿನ ಕುಡಿ, ಕದಂಬ, ಸುಪ್ರಭಾತ, ರುದ್ರ, ಲಯನ್ ಜಗಪತಿ ರಾವ್, ಒಂದಾಗಿ ಬಾಳು, ಡಿಸೆಂಬರ್ 31, ಹೃದಯವಂತ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಏಕದಂತ, ಡಾಕ್ಟರ್ ಕೃಷ್ಣ, ಗಾಡ್ ಫಾದರ್, ಆಪ್ರಮಿತ್ರ, ಆಪ್ತರಕ್ಷಕ ಸೇರಿದಂತೆ ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅನುರಾಗ ದೇವತೆ, ಮನೆಮನೆ ರಾಮಾಯಣ, ಸಕಲಕಲಾವಲ್ಲಭ, ಹೃದಯಾಂಜಲಿ, ಪಂಜಾಬಿ ಹೌಸ್, ಮುಂತಾದ ಸಿನಿಮಾಗಳಿಗೆ ವಿ.ಆರ್.ಭಾಸ್ಕರ್ ನಿರ್ದೇಶಕರು. ಇಂದು ಮೈಸೂರಿನ (Mysore) ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
Web Stories