ಹೈದರಾಬಾದ್: ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು ಎಂದು ನಿರ್ದೇಶಕನೊಬ್ಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ.
ನಿರ್ದೇಶಕ ಡೇನಿಯಲ್ ಶ್ರವಣ್ ತನ್ನ ಫೇಸ್‍ಬುಕ್‍ನಲ್ಲಿ ರೀತಿಯ ಪೋಸ್ಟ್ ಹಾಕಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಪಶುವೈದ್ಯೆಯ ಹತ್ಯೆಗೆ ಸಂಬಂಧಿಸಿದಂತೆ ಡೇನಿಯಲ್ ತನ್ನ ಫೇಸ್‍ಬುಕ್‍ನಲ್ಲಿ ಈ ರೀತಿಯ ಪೋಸ್ಟ್ ಹಾಕಿಕೊಂಡಿದ್ದಾನೆ. ಬಳಿಕ ಈ ಪೋಸ್ಟ್ ತನ್ನ ಚಿತ್ರದ ವಿಲನ್ ಡೈಲಾಗ್ ಎಂದು ಡಿಲೀಟ್ ಮಾಡಿದ್ದಾನೆ.
Advertisement
If this is for real, I want to die. pic.twitter.com/yT5zsepJ6f
— Sonal Kalra ???????? (@sonalkalra) December 4, 2019
Advertisement
ಪೋಸ್ಟ್ ನಲ್ಲಿ ಏನಿತ್ತು?
ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು. ಅತ್ಯಾಚಾರಕ್ಕೆ ಒಳಗಾದವರ ಹತ್ಯೆಯನ್ನು ನಿಯಂತ್ರಿಸುವ ಏಕೈಕ ದಾರಿ ಏನೆಂದರೆ ‘ಹಿಂಸಾಚಾರವಿಲ್ಲದೆ ಅತ್ಯಾಚಾರಗಳನ್ನು’ ಕಾನೂನುಬದ್ಧಗೊಳಿಸುವುದು. 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಈ ರೀತಿ ಪ್ರಕರಣಗಳು ನಡೆಯುವುದಿಲ್ಲ. ಭಾರತದ ಮಹಿಳೆಯರಿಗೆ ಸೆಕ್ಸ್ ಎಜುಕೇಶನ್ ಬಗ್ಗೆ ತಿಳಿದಿರಬೇಕು ಎಂದು ಬರೆದುಕೊಂಡಿದ್ದನು.
Advertisement
Whoever this Daniel Shravan is: needs medical help, maybe some heavy duty whacks up his butt, will help him clear his constipated mind.
Infuriating little prick. https://t.co/z8WVpClKTC
— Kubbra Sait (@KubbraSait) December 4, 2019
Advertisement
ಪುರುಷರ ಬಯಕೆ ಈಡೇರಿದರೆ ಅವರು ಮಹಿಳೆಯರನ್ನು ಕೊಲೆ ಮಾಡುವುದಿಲ್ಲ. ಅತ್ಯಾಚಾರ ನಂತರ ಕೊಲೆ ಮಾಡುವುದನ್ನು ತಡೆಯಲು ಸರ್ಕಾರ ಈ ರೀತಿಯಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಸಮಾಜ, ಸರ್ಕಾರ ಹಾಗೂ ಮಹಿಳಾ ಸಂಘಟನೆ ನಿರ್ಭಯಾ ಕಾಯ್ದೆ, ಪೆಪ್ಪರ್ ಸ್ಪ್ರೇಯಿಂದ ಅತ್ಯಾಚಾರಿಗಳನ್ನು ಹೆದರಿಸುತ್ತಿದೆ. ಅತ್ಯಾಚಾರಿಗಳು ತಮ್ಮ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆ ಯಾವುದೇ ಮಾರ್ಗ ಕೊಂಡುಕೊಳ್ಳುತ್ತಿಲ್ಲ. ಹಾಗಾಗಿ ಅವರಿಗೆ ಕೊಲೆ ಮಾಡುವ ಯೋಚನೆ ಬರುತ್ತಿದೆ. ಮಹಿಳೆಯರು ಪುರುಷರ ಜೊತೆಗೆ ದೈಹಿಕ ಸಂಬಂಧ ಬೆಳೆಸುವುದು ಒಳ್ಳೆಯದು ಎಂದು ಬರೆದು ಡೇನಿಯಲ್ ಶ್ರವಣ್ ಪೋಸ್ಟ್ ಹಾಕಿದ್ದನು.
ನಿರ್ದೇಶಕ ಡೇನಿಯಲ್ ಪೋಸ್ಟ್ ಗೆ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಹಾಗೂ ಬಾಲಿವುಡ್ ನಟಿ ಕುಬ್ರಾ ಸೇಠ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
Ideas going around.
Some of this content is in Telugu. Basically the ideas these men have given is – cooperate and offer condoms to prevent murder after rape, women’s organizations are the reason for rape.
Rape is not heinous, murder is. pic.twitter.com/2eqhrQA02T
— Chinmayi Sripaada (@Chinmayi) December 3, 2019