ಸಿಕ್ಸರ್ ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್ ಗೆ ಸ್ಟಾರ್ ಡಮ್ ತಂದುಕೊಟ್ಟವರು ನಿರ್ದೇಶಕ ಶಶಾಂಕ್. ಮೊಗ್ಗಿನ ಮನಸು ಸಿನಿಮಾದಲ್ಲಿದ್ದ ಅಷ್ಟೂ ನಟ ನಟಿಯರೂ ಇಂದು ಟಾಪ್ ನಲ್ಲಿದ್ದಾರೆ. ಅಜಯ್ ರಾವ್ ಮತ್ತು ಶಶಾಂಕ್ ಕಾಂಬಿನೇಷನ್ ನ ಬಹುತೇಕ ಸಿನಿಮಾಗಳು ಹಿಟ್. ಹೀಗಾಗಿ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯ ಆಗುತ್ತಿರುವ ಪ್ರವೀಣ್ ಮೇಲೆಯೂ ಅಷ್ಟೇ ನಿರೀಕ್ಷೆ ಹೊಂದಲಾಗಿದೆ.
Advertisement
ಲವ್ ಸ್ಟೋರಿಯನ್ನು ಸೊಗಸಾಗಿ ಹೇಳುವುದರಲ್ಲಿ ಶಶಾಂಕ್ ಸಿದ್ಧಹಸ್ತರು. ಅದರಲ್ಲೂ ಯುವಕರನ್ನೇ ಗುರಿಯಾಗಿಟ್ಟುಕೊಂಡು ಮಾಡಿರುವ ಅವರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಹಾಗಾಗಿ ಲವ್ 360 ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ಪ್ರೀತಿಯ ಹಲವು ಆಯಾಮಗಳನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದರಿಂದ, ಸ್ಯಾಂಡಲ್ ವುಡ್ ಪ್ರೇಕ್ಷರು ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ:ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್
Advertisement
Advertisement
ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಗಮನ ಸೆಳೆದಿದೆ. ಹಾಡುಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಫ್ರೆಶ್ ಆಗಿರುವಂತಹ ಲವ್ ಸ್ಟೋರಿಯನ್ನು ಈ ಸಿನಿಮಾದ ಮೂಲಕ ನಿರ್ದೇಶಕರು ಹೇಳಲು ಹೊರಟಿರುವುದರಿಂದ, ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾಗಳ ಸಾಲಿನಲ್ಲಿ ಇರಲಿದೆ ಎನ್ನುವುದು ಸ್ಯಾಂಡಲ್ ವುಡ್ ಲೆಕ್ಕಾಚಾರ. ಇದೊಂದು ಪಕ್ಕಾ ಕಾಲ್ಪನಿಕ ಕಥೆಯಾಗಿದ್ದು, ಎಂತಹ ಕಠಿಣ ಸಂದರ್ಭ ಬಂದರೂ, ಪರಸ್ಪರರು ಬೆಂಬಲಕ್ಕೆ ಹೇಗೆ ಬರುತ್ತಾರೆ ಎನ್ನುವುದು ಸಿನಿಮಾದ ಆಶಯ.
Advertisement
ಈ ಸಿನಿಮಾದ ಮೂಲಕ ಮತ್ತೋರ್ವ ನಟ ಸಿನಿಮಾ ರಂಗಕ್ಕೆ ನಾಯಕನಾಗಿ ಪ್ರವೇಶ ಮಾಡುತ್ತಿದ್ದರೆ, ಇವರ ಜೊತೆಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಯೋಗರಾಜ್ ಭಟ್ ಕೂಡ ಈ ಸಿನಿಮಾಗಾಗಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್, ಯೋಗರಾಜ್ ಭಟ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ನ ಹಾಡು ಕೂಡ ಮೊನ್ನೆಯಷ್ಟೇ ರಿಲೀಸ್ ಆಗಿ, ಗಮನ ಸೆಳೆದಿದೆ.