ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

Public TV
1 Min Read
FotoJet 64

ಸ್ಯಾಂಡಲ್‌ವುಡ್ ನಿರ್ದೇಶಕ ಶಶಾಂಕ್ (Shashank) ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಚಿತ್ರಕ್ಕಾಗಿ 5ನೇ ಬಾರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಜೊತೆ ಶಶಾಂಕ್ ಕೈಜೋಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಡೈರೆಕ್ಟರ್ ತರುಣ್ ಜೊತೆ ಸೋನಲ್ ಮದುವೆ ಡೇಟ್ ಫಿಕ್ಸ್

darling krishna 1 1

ಡಾರ್ಲಿಂಗ್ ಕೃಷ್ಣ (Darling Krishna) ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶಶಾಂಕ್ ಡೈರೆಕ್ಷನ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಈ ಚಿತ್ರ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ 5ನೇ ಬಾರಿ ಅರ್ಜುನ್‌ ಜನ್ಯ ಜೊತೆ ಒಂದಾಗುತ್ತಿರೋದಾಗಿ ಶಶಾಂಕ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಸದ್ಯ DKS -02 ಅಂತ ಹೆಸರಿಡಲಾಗಿದೆ. ಈ ಮೂಲಕ ಸಂಗೀತ ಸಂಯೋಜನೆಯ ಕೆಲಸ ಶುರು ಆಗಿದೆ ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಸಿನಿಮಾದ ಟೈಟಲ್ ಶೀಘ್ರದಲ್ಲಿಯೇ ಅನೌನ್ಸ್ ಮಾಡುವ ಪ್ಲ್ಯಾನ್ ಕೂಡ ಹಾಕಲಾಗಿದೆ. ಆ ವಿಷಯನ್ನ ಕೂಡ ಇದೀಗ ವಿಡಿಯೋ ಮೂಲಕವೇ ಹೇಳಿದ್ದಾರೆ. ಡಾಲ್ಫಿನ್ ಸಂಸ್ಥೆ ಮೂಲಕ ಮಂಜುನಾಥ್ ಕಂದಕೂರು ಈ ಚಿತ್ರವನ್ನ ನಿರ್ಮಿಸೋಕೆ ಸಾಥ್‌ ನೀಡಿದ್ದಾರೆ.

ಇನ್ನೂ ಈ ಹಿಂದೆ ಮುಂಗಾರು ಮಳೆ 2, ಜರಾಸಂಧ, ಲವ್ 360, ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕಾಗಿ ಶಶಾಂಕ್‌ ಜೊತೆ ಅರ್ಜುನ್‌ ಜನ್ಯ ಕೆಲಸ ಮಾಡಿದ್ದಾರೆ. ಈಗ ಹೊಸ ಪ್ರಾಜೆಕ್ಟ್ ಮೂಲಕ ಬರುತ್ತಿರೋದ್ರಿಂದ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.

Share This Article