ಕೆಲ ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಚಿತ್ರರಂಗವನ್ನ ಶೇಕ್ ಮಾಡಿದೆ. ಇದೀಗ ಖ್ಯಾತ ನಿರ್ದೇಶಕ ಶಂಕರ್(Director Shankar) ಕೂಡ ಇಂತಹದ್ದೇ ಪ್ರಯಕ್ಕೆ ಕೈ ಹಾಕಿದ್ದಾರೆ. ಸ್ಟಾರ್ ನಟ ರಣ್‌ವೀರ್ ಸಿಂಗ್‌ಗೆ (Ranveer Singh) ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.
Advertisement
ಶಂಕರ್ ಮತ್ತು ರಣ್‌ವೀರ್ ಸಿಂಗ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. ತಮಿಳು ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿರುವ `ವೆಲ್‌ಪರಿ'(Velpari) ಎಂಬ ಐತಿಹಾಸಿಕ ಕಾದಂಬರಿಯನ್ನ ಈ ಚಿತ್ರ ಆಧರಿಸಿದೆ. ವೆಂಕಟೇಶನ್ ಬರೆದಿರುವ ವೆಲ್‌ಪರಿ ಕಾದಂಬರಿಯನ್ನ ತೆರೆಯ ಮೇಲೆ ಅದ್ದೂರಿ ತೋರಿಸಲು ಶಂಕರ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್
Advertisement
Advertisement
ಈ ಸಿನಿಮಾದಲ್ಲಿ ಎಲ್ಲವೂ ಇದೆ. ಒಂದು ಅದ್ಭುತವಾದ ಪ್ರೇಮಕಥೆಯ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲವನ್ನೂ ಒಳಗೊಂಡಿದೆ. ಗ್ರಾಫಿಕ್ಸ್ ಈ ಚಿತ್ರದಲ್ಲಿ ಪಾತ್ರ ವಹಿಸಲಿದೆ. ಇನ್ನೂ ಮಾಡಿರದ ವಿಭಿನ್ನ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.
Advertisement
ಶಂಕರ್ ಮತ್ತು ರಣ್‌ವೀರ್ ಈ ಕಾಂಬಿನೇಷನ್ನ ʻಅನ್ನಿಯನ್ʼ ಚಿತ್ರ ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ರಾಮ್‌ಚರಣ್ ಸಿನಿಮಾ ಮತ್ತು ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ನಂತರ ರಣ್‌ವೀರ್ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಲಿದ್ದಾರೆ.