ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಗೆ (Jayadeva Hospital) ನಿರ್ದೇಶಕರ (Director) ಆಯ್ಕೆ ಸಂಬಂಧ 20 ವರ್ಷಗಳ ಬಳಿಕ ವೈದ್ಯರ ಸಂದರ್ಶನ ನಡೆಯಿತು. 11 ವೈದ್ಯರನ್ನ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಮಿತಿ ಸಂದರ್ಶನ ನಡೆಸಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಂದರ್ಶನ ನಡೆಯಿತು. 11 ಜನ ವೈದ್ಯರ ಪೈಕಿ 10 ಜನ ವೈದ್ಯರು sಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ ಸಿಎಂ ನೇತೃತ್ವದ ಸಮಿತಿ ನಿರ್ದೇಶಕರ ಆಯ್ಕೆ ಮಾಡಿದೆ. ನಿರ್ದೇಶಕರ ನೇಮಕ ಸಂಬಂಧ ಕೋರ್ಟ್ನಲ್ಲಿ ಕೇಸ್ ಇರುವುದರಿಂದ ಆಯ್ಕೆಯನ್ನ ಸರ್ಕಾರ ಘೋಷಣೆ ಮಾಡಿಲ್ಲ. ಇದನ್ನೂ ಓದಿ: ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ: ‘ಕೈ’ ಯಾತ್ರೆಗೆ ಯತ್ನಾಳ್ ಲೇವಡಿ
ಸೆಪ್ಟೆಂಬರ್ 10ಕ್ಕೆ ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ನಿರ್ದೇಶಕರ ಆಯ್ಕೆ ಘೋಷಣೆ ಮಾಡಲಿದೆ. ಮೈಸೂರು ಜಯದೇವದ ಡಾ.ದಿನೇಶ್.ಬಿ ಆಯ್ಕೆ ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಇದನ್ನೂ ಓದಿ: Tumakuru | ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕೆಎನ್ ರಾಜಣ್ಣ ಅವಿರೋಧ ಆಯ್ಕೆ