ಮಂಗಳೂರು: ಫೋಟೋ ಶೂಟ್‍ಗಾಗಿ ತೆರಳಿದ್ದ ನಿರ್ದೇಶಕ ಫಾಲ್ಸ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಶೆಟ್ಟಿ ಸಾವನ್ನಪ್ಪಿದ ನಿರ್ದೇಶಕ. ಸಂತೋಷ್ ಸೇರಿದಂತೆ ಐವರು ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಗೆ ಫೋಟೋ ಶೂಟ್‍ಗೆ ತೆರಳಿದ್ರು. ಈ ವೇಳೆ ಸಂತೋಷ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಮೆಕುನು ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಫಾಲ್ಸ್ ನಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿತ್ತು. ಫೋಟೋ ಶೂಟ್ ನಡೆಸುವಾಗ ಆಯ ತಪ್ಪಿ ಸಂತೋಷ್ ನೀರಿಗೆ ಬಿದ್ದಿದ್ದಾರೆ ಎಂಬ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿವೆ.
Advertisement
Advertisement
2015ರಲ್ಲಿ ‘ಕನಸು ಕಣ್ಣು ತೆರೆದಾಗ’ ಎಂಬ ಸಿನಿಮಾವನ್ನು ಸಂತೋಷ್ ನಿರ್ದೇಶಿಸಿದ್ರು. ಗಂಧದ ಕುಡಿ ಕನ್ನಡದಲ್ಲಿ, ಚಂದನ್ ವನ್ ಹಿಂದಿಯಲ್ಲಿ ಮಕ್ಕಳ ಚಿತ್ರವನ್ನು ಸಂತೋಷ್ ನಿರ್ದೇಶಿಸುತ್ತಿದ್ರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಸಂತೋಷ್ ಮೃತ ದೇಹಕ್ಕಾಗಿ ಶೋಧನೆ ನಡೆಸುತ್ತಿದ್ದಾರೆ.