ದೊಡ್ಮನೆ ಕುಡಿ ಯುವರಾಜ್‌ಕುಮಾರ್(Yuvarajkumar), ಸಪ್ತಮಿ ಗೌಡ ನಟನೆಯ ಯುವ ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸದ್ಯ ಹೊಸಪೇಟೆ ಜನತೆಯ ಮುಂದೆ ‘ಯುವ’ ಚಿತ್ರದ ಪ್ರೀ- ರಿಲೀಸ್ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ, ಮೊದಲ ಚಿತ್ರದಲ್ಲಿ ಯುವಗೆ ಓಡೋ ಟಾಸ್ಕ್ ಯಾಕೆ ಕೊಟ್ರು ಅಂತ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ (Santhosh Anandram) ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
Advertisement
ವೇದಿಕೆಗೆ ಎಂಟ್ರಿ ಕೊಡುತ್ತಿರುವಾಗಲೇ ಪುನೀತ್ ರಾಜ್‌ಕುಮಾರ್ ಅವರನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸ್ಮರಿಸಿದ್ದಾರೆ. ಯುವರತ್ನದಿಂದ ಯುವವರೆಗೂ ನನ್ನದು ಚಾಲೆಂಜಿಂಗ್ ಜರ್ನಿ. ನಾನು ಕಳೆದುಕೊಂಡಿದ್ದು ನನ್ನ ಅಣ್ಣ, ನನ್ನ ರತ್ನ, ಕರ್ನಾಟಕದ ರಾಜರತ್ನ ಅಪ್ಪು ಅಣ್ಣರನ್ನು ಎಂದಿದ್ದಾರೆ. ಅಲ್ಲಿಂದ ಪ್ರತಿ ಕ್ಷಣ ನನ್ನನ್ನು ಒಬ್ಬಂಟಿಯಾಗಿ ಬಿಡದೇ ಇದ್ದಿದ್ದು ನೀವುಗಳು. ಎಲ್ಲಾ ಅವರ ಅಭಿಮಾನಿಗಳು ತುಂಬಾ ದೊಡ್ಡ ಶಕ್ತಿಯಾಗಿ ನಿಂತುಕೊಂಡಿದ್ದೀರಿ. ಆಶೀರ್ವಾದ ಮಾಡಿದ್ದೀರಿ. ಅಲ್ಲಿಂದ ‘ಯುವ’ ಸಿನಿಮಾದವರೆಗೂ ಬಂದಿದ್ದೀನಿ ಅಂದರೆ, ನಿಮ್ಮೆಲ್ಲರ ಹಾರೈಕೆ ಎಂದಿದ್ದಾರೆ. ಇದನ್ನೂ ಓದಿ:ನಾನು ಡ್ರ್ಯಾಗನ್ ಎನ್ನುತ್ತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಸಮಂತಾ
Advertisement
Advertisement
ಬಳಿಕ ‘ಯುವ’ ಸಿನಿಮಾ ಶುರುವಾಗಿದ್ದು ಹೇಗೆ? ಅನ್ನೋದನ್ನು ಸಂತೋಷ್ ಆನಂದ್‌ರಾಮ್ ರಿವೀಲ್ ಮಾಡಿದ್ದಾರೆ. ಈ ಸಿನಿಮಾ ಆಗುವುದಕ್ಕೆ ಕಾರಣ ಅಶ್ವಿನಿ ಮೇಡಂ. ಅವರು ವಿಜಯ್ ಕಿರಗಂದೂರು ಸರ್‌ಗೆ ಫೋನ್ ಮಾಡಿ ಗುರುಗೆ ಒಂದು ಸಿನಿಮಾ ಮಾಡಬೇಕು ಅಂತ ಹೇಳುತ್ತಾರೆ. ಆ ನಂತರ ವಿಜಯ್ ಅವರು ನನಗೆ ತಿಳಿಸಿದ್ದರು. ನೀನು ಯುವನನ್ನು ಲಾಂಚ್ ಮಾಡಬೇಕು ಅಂತ. ಒಂದು ಫೋನ್ ಕರೆ ಇವತ್ತು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ವಿಜಯ್ ಕಿರಗಂದೂರು ಸರ್ ಕೂಡ ಒಂದೇ ಮಾತು ಹೇಳಿದ್ದು, ಗುರು (ಯುವ) ಲಾಂಚ್ ಮಾಡುವುದು ಒಂದು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ನಾವು ಸಿನಿಮಾವನ್ನು ನಿಲ್ಲಿಸಬೇಕು ಅಂತ ಹೇಳಿರೋದನ್ನು ಸ್ಮರಿಸಿದ್ದಾರೆ.
Advertisement
View this post on Instagram
‘ಯುವ’ ಸಿನಿಮಾ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ. ಹೀಗಾಗಿ ಸಣ್ಣ ಪುಟ್ಟ ತಪ್ಪುಗಳಾಗಿದ್ದರೆ ಕ್ಷಮಿಸಿ ಎಂದು ಸಂತೋಷ್ ಆನಂದ್‌ರಾಮ್ ಇದೇ ವೇಳೆ ಹೇಳಿಕೊಂಡಿದ್ದಾರೆ. ಮಗು ಮೊದಲನೇ ಹೆಜ್ಜೆ ಇಟ್ಟಾಗ ಎಡುವುತ್ತದೆ. ಮಾತಾಡುವಾಗ ತೊದಲುತ್ತೆ. ಮುಂದಿನ ಸಿನಿಮಾಗಳಲ್ಲಿ ನಾವು ಸರಿ ಮಾಡಿಕೊಳ್ಳುತ್ತೇವೆ. ‘ಯುವ’ ಚಿತ್ರವನ್ನು ಗೆಲ್ಲಿಸಲು ಅಭಿಮಾನಿಗಳಲ್ಲಿ ಸಂತೋಷ್ ಆನಂದ್‌ರಾಮ್ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ, ಯುವ ಸಿನಿಮಾಗೆ ತೆಗೆದ ಮೊದಲ ಶಾಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಅದನ್ನು ರಜನಿಕಾಂತ್ ಮೊದಲ ಸಿನಿಮಾದ ಮೊದಲ ಶಾಟ್‌ಗೆ ಉದಾಹರಣೆ ಕೊಟ್ಟು ಸಂತೋಷ್ ಮಾತನಾಡಿದ್ದಾರೆ. ನಾವು ಮೊದಲು ಫೈಟ್‌ನಿಂದ ಶೂಟಿಂಗ್ ಶುರು ಮಾಡಿದ್ವಿ. ಅದು ಓಡುವ ಶಾಟ್. ನನಗೆ ಯಾವುದೋ ಸಂದರ್ಶನದಲ್ಲಿ ಓದಿದ ನೆನಪು. ರಜನಿಕಾಂತ್ ಮೊದಲನೇ ಸಿನಿಮಾ ‘ಅಪೂರ್ವ ರಾಗಂಗಳ್’ನಲ್ಲಿ ಮೊದಲ ಗೇಟ್ ತೆಗೆಯುವ ಶಾಟ್ ಇಟ್ರಂತೆ. ಯಾಕಂದ್ರೆ ಅಲ್ಲಿಂದ ಜೀವನ ಶುರುವಾಗಲಿ, ಹೊಸ ಜರ್ನಿ ಶುರುವಾಗಲಿ ಅಂತ. ನಾವಿಲ್ಲಿ ಗುರುವಿನದ್ದು ಓಡುವ ಶಾಟ್ ಇಟ್ಟಿದ್ದೇವೆ. ಯಾಕಂದ್ರೆ, ಈ ಕುದುರೆ ಓಡುತ್ತಲೇ ಇರಬೇಕು ಅಂತ ಎಂದು ಮಾತನಾಡಿದ್ದಾರೆ. ‘ಯುವ’ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಚಿತ್ರರಂಗದಲ್ಲಿ ಓಡೋ ಕುದುರೆಯಾಗಿ ಗೆಲ್ಲಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ನನಗೆ ಈ ಸಿನಿಮಾ ಮಾಡುವಾಗ ತುಂಬಾ ನೆನಪುಗಳಿವೆ. ಅದರಲ್ಲೂ ಅಪ್ಪು ಅಣ್ಣನ ನೆನಪು ತುಂಬಾನೇ ಇದೆ. ನಾನು ಕಂಡುಕೊಂಡ ವ್ಯತ್ಯಾಸ. ಒಬ್ಬ ರಾಜನಿಗೂ, ರಾಜಕುಮಾರನಿಗೂ ಏನು ಅಂದರೆ ರಾಜನಿಗೂ ಸೈನ್ಯ ಇರುತ್ತದೆ. ರಾಜಕುಮಾರನಿಗೂ ಸೈನ್ಯ ಇರುತ್ತದೆ. ರಾಜ ಯುದ್ಧ ಮಾಡಿದ ಆದರೆ ರಾಜಕುಮಾರ ಬರೀ ಪ್ರೀತಿ ತೋರಿಸಿದ ಎಂದು ಹೇಳುತ್ತಾ ಅಪ್ಪುರನ್ನು ಸಂತೋಷ್ ಆನಂದ್ ರಾಮ್ ಸ್ಮರಿಸಿದ್ದಾರೆ. ಅಪ್ಪು ಸರ್ ನನಗೆ ಕುಟುಂಬಿಕ ಮೌಲ್ಯಗಳನ್ನು ಹೇಳಿ ಕೊಟ್ಟು ಹೋಗಿದ್ದಾರೆ ಎಂದು ಮಾತನಾಡಿದ್ದಾರೆ.
ಅಂದಹಾಗೆ, ‘ಯುವ’ (Yuva) ಸಿನಿಮಾ ಇದೇ ಮಾರ್ಚ್ 29ಕ್ಕೆ ರಿಲೀಸ್ ಆಗುತ್ತಿದೆ. ಯುವಗೆ ನಾಯಕಿಯಾಗಿ ‘ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ (Sapthami Gowda) ನಟಿಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.