ದುಲ್ಕರ್ ಸಲ್ಮಾನ್ ಜೊತೆ ಮೃಣಾಲ್ ಠಾಕೂರ್ (Mrunal Thakur) ಡ್ಯುಯೇಟ್ ಹಾಡಿದ ಮೇಲೆ ನಟಿಯ ಲಕ್ ಬದಲಾಗಿದೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಬಂಪರ್‌ಗಳನ್ನ ಬಾಚಿಕೊಳ್ತಿದ್ದಾರೆ. ಹೀಗಿರುವಾಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ನಟಿಸುವ ಚಾನ್ಸ್ ಅನ್ನ ನಟಿ ಗಿಟ್ಟಿಸಿಕೊಂಡಿದ್ದಾರೆ.
ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟ ಮೇಲೆ ಬನ್ಸಾಲಿ ಅವರ ಸಿನಿಮಾದಲ್ಲಿ ಹೀರೋಯಿನ್ ಆಗಬೇಕು ಎಂಬುದು ಪ್ರತಿಯೊಬ್ಬರ ನಾಯಕಿಯರ ಕನಸು. ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಆಲಿಯಾ ಭಟ್ ಅವರಂತಹ ನಟಿಯರು ಬನ್ಸಾಲಿ ಗರಡಿಯಲ್ಲಿ ಪಳಗಿ ಗೆದ್ದಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಸಕ್ಸಸ್ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂದು ಕಾಯ್ತಿದ್ದವರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್ ಡೇಟ್ ಫಿಕ್ಸ್
ಸದ್ಯ ಅವರು ‘ಹೀರಾಮಂಡಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ಚಿತ್ರೀಕರಣ ಅಂತ್ಯವಾಗಲಿದೆ. ಬಳಿಕ ಮೃಣಾಲ್ ಠಾಕೂಲ್‌ಗೆ ಸಂಜಯ್ ಲೀಲಾ ಬನ್ಸಾಲಿ(Sanjay Leela Bansali) ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿದ್ಧಾಂತ್ ಚತುರ್ವೇದಿಗೆ ನಾಯಕಿಯಾಗಿ ‘ಸೀತಾರಾಮಂ’ (Seetha Ramam) ನಟಿ ಸಾಥ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ರವಿ ಉದ್ಯಾವರ್ ನಿರ್ದೇಶನ ಮಾಡುತ್ತಿದ್ದಾರೆ.
2024ರ ವೇಳೆ ಈ ಸಿನಿಮಾ ಶುರುವಾಗಲಿದೆ. ಒಂದು ವಿಭಿನ್ನ ಲವ್ ಸ್ಟೋರಿಯನ್ನ ಈ ಜೋಡಿಯ ಮೂಲಕ ತೋರಿಸಲು ಹೊರಟಿದ್ದಾರೆ. ಸಿದ್ಧಾಂತ್- ಮೃಣಾಲ್ ಜೋಡಿ ತೆರೆಯ ಮೇಲೆ ಕ್ಲಿಕ್ ಆಗುತ್ತಾರಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]