ಬರಹಗಾರರಿಗೆ ಸುವರ್ಣಾವಕಾಶ ನೀಡಿದ ರಿಷಬ್ ಶೆಟ್ಟಿ

Public TV
1 Min Read
Rishab shetty

ಬೆಂಗಳೂರು: ಚಂದನವನದ ಟ್ಯಾಲೆಂಟೆಡ್ ನಿರ್ದೇಶಕ ರಿಷಬ್ ಶೆಟ್ಟಿ ಬರಹಗಾರರಿಗೊಂದು ಸುವರ್ಣ ಅವಕಾಶವನ್ನು ನೀಡಿದ್ದಾರೆ. ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರಗಳಿಗೆ ಬರಹಗಾರರನ್ನು ಹುಡುಕುತ್ತಿದ್ದು, ಈ ಸಂಬಂಧ ಟ್ವಿಟ್ಟರ್ ನಲ್ಲಿ ಹೊಸ ಬರಹಗಾರರಿಗೆ ಅವಕಾಶ ನೀಡುತ್ತಿರುವ ವಿಚಾರವನ್ನು ತಿಳಿಸಿದ್ದಾರೆ.

ಆಸಕ್ತಿಯುಳ್ಳ ಬರಹಗಾರರು ರಿಷಬ್ ಶೆಟ್ಟಿ ಸೂಚಿಸಿರುವ ಮೂರು ವಿಷಯಗಳ ಕುರಿತಾಗಿ ಬರದು ಮೇಲ್ (write4rsf@gmail.com) ಮಾಡಬೇಕು. ಬರಹಗಾರರು ತಮ್ಮ ಲೇಖನವನ್ನು ಮೇ 23ರೊಳಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.

Rishabh Shetty FB 750

ಮೂರು ವಿಷಯಗಳು:
1. ಅಂತ್ಯಸಂಸ್ಕಾರದ ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ದೃಶ್ಯವಾಗಿ (ಸಂಭಾಷಣೆ ಸಹಿತ), ಎರಡು ಪುಟಗಳುಗೆ ಮೀರದಂತೆ ಬರೆಯಬೇಕು
2. ಈ ಕೆಳಗಿನ ಯಾವುದಾರರೂ ಒಂದು ಪಾತ್ರಕ್ಕೆ ಅದರ ಪಾತ್ರ ಚಿತ್ರಣವನ್ನು ನಿಮ್ಮದೇ ದೃಷ್ಟಿಕೋನದಲ್ಲಿ ಒಂದು ಪುಟಕ್ಕೆ ಮೀರದಂತೆ ಬರೆಯಬೇಕು.
ಎ. ಅನಂತ ಪದ್ಮನಾಭ ಪಿ. (SHPS) ಬಿ. ಶೇಖರ (ರಂಗನಾಯಕಿ) ಸಿ. ರತ್ನಕ್ಕ (ಉಳಿದವರು ಕಂಡಂತೆ) ಡಿ. ಕುಸುಮ (ಬೆಲ್ ಬಾಟಮ್)
3. ಒಂದು ವೇಳೆ ‘ಕಿರಿಕ್ ಪಾರ್ಟಿ’ ಗ್ಯಾಂಗ್ ಸ್ಟರ್ ಶೈಲಿಯ ಚಿತ್ರವಾಗಿದ್ದರೇ..? ಅದರ ಕಥೆಯ ಎಳೆಯನ್ನು ಎರಡು ಪುಟಗಳಿಗೆ ಮೀರದಂತೆ ಬರೆಯಬೇಕು.

Share This Article
Leave a Comment

Leave a Reply

Your email address will not be published. Required fields are marked *