ಲೋಕಸಭಾ ಚುನಾವಣಾ ಕಣದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

Public TV
1 Min Read
Pawan Kalyan 1

ದಾ ಅಚ್ಚರಿಯ ಹೇಳಿಕೆಗಳನ್ನು ಕೊಡುತ್ತಾ ಬಂದಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma), ಈ ಬಾರಿಯ ಮತ್ತೊಂದು ಹೊಸ ಸುದ್ದಿ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಹಂಚಿಕೊಂಡಿದ್ದಾರೆ.

pawan kalyan

ಮತ್ತೊಂದು ಶಾಕಿಂಗ್ ಸಂಗತಿ ಅಂದರೆ, ಅವರು ಈ ಬಾರಿ ಚುನಾವಣೆಯನ್ನು ಎದುರಿಸುತ್ತಿರುವುದು ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಎಂದು ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದಾರಂತೆ. ಅದೇ ಕ್ಷೇತ್ರದಲ್ಲೇ ತಾವೂ ಸ್ಪರ್ಧೆ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ.

ram gopal varma 3

ಹಲವು ವರ್ಷಗಳಿಂದ ಪವನ್ ಕಲ್ಯಾಣ್ ಅವರಿಗೂ ವರ್ಮಾ ಅವರಿಗೂ ಶಿತಲ ಸಮರ ನಡೆಯುತ್ತಲೇ ಇದೆ. ಅದು ಸಿನಿಮಾಗಳ ಮೂಲಕ ಮತ್ತಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ಬಾರಿ ಚುನಾವಣೆಗೆ ಏನಾದರೂ ವರ್ಮಾ ನಿಂತರೆ, ಅದು ಮತ್ತೊಂದು ದಿಕ್ಕು ಪಡೆದುಕೊಳ್ಳುವುದು ಸ್ಪಷ್ಟ.

 

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಈ ಕುರಿತಂತೆ ಪೋಸ್ಟ್ ಮೂಡಿ, ಕುತೂಹಲ ಮೂಡಿಸಿದ್ದಾರೆ. ನಿಜವಾಗಿಯೂ ರಾಜಕೀಯ ಕಣದಲ್ಲಿ ಇರುತ್ತಾರಾ? ಅಥವಾ ಪೋಸ್ಟ್ ಮಾಡಿ ಸುಮ್ಮನಾಗ್ತಾರಾ ಕಾದು ನೋಡಬೇಕು.

Share This Article