– ಬಾಲಿವುಡ್ ಅಂಗಳದಲ್ಲಿ ಸಂಚಲನ
– ಸಂಜು ಚಿತ್ರದ ಸಹಾಯಕ ನಿರ್ದೇಶಕಿಗೆ ಲೈಂಗಿಕ ಕಿರುಕುಳ
ಮುಂಬೈ: ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದೆ. ಮುನ್ನಾಭಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ ಮತ್ತು ಸಂಜು ಸೂಪರ್ ಹಿಟ್ ಗಳನ್ನು ನೀಡಿರುವ ಹಿರಾನಿ ವಿರುದ್ಧ ಮೀಟೂ ಆರೋಪ ಕೇಳಿ ಬರುತ್ತಿದ್ದಂತೆ ಸಿನಿ ಅಂಗಳದಲ್ಲಿ ಸಂಚಲನವೇ ಸೃಷ್ಟಿಯಾಗಿದೆ.
ಹಫಿಂಗ್ಟನ್ ಪೋಸ್ಟ್ ಅನ್ವಯ, ಸಂಜು ಸಿನಿಮಾದ ಸಹಾಯಕ ನಿರ್ದೇಶಕಿಗೆ ರಾಜ್‍ಕುಮಾರ್ ಹಿರಾನಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಂಜು ಚಿತ್ರದ ಚಿತ್ರೀಕರಣದ ಬಳಿಕ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಅಂದ್ರೆ 2018ರ ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ಹಿರಾನಿ ನನಗೆ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
Advertisement
Advertisement
ನನ್ನ ಮೇಲಾಗುತ್ತಿದ್ದ ದೌರ್ಜನ್ಯಕ್ಕೆ ವಿರೋಧ ವ್ಯಕ್ತಪಡಿಸಿದಾಗ ನನ್ನನ್ನು ಸಿನಿಮಾದಿಂದ ಕೈ ಬಿಡಲಾಗುವುದು ಮತ್ತು ವೃತ್ತಿ ಜೀವನವನ್ನು ಸಂಪೂರ್ಣ ನಾಶ ಮಾಡ್ತೇನೆ ಎಂದು ರಾಜ್‍ಕುಮಾರ್ ಹಿರಾನಿ ಬೆದರಿಕೆ ಹಾಕಿದ್ದರು. ಅಂದು ಉದ್ಯೋಗ ಉಳಿಸಿಕೊಳ್ಳುವುದಕ್ಕಾಗಿ ನನ್ನ ಮೇಲೆ ನಡೆದ ದೌರ್ಜನ್ಯವನ್ನು ಹೇಳಿಕೊಳ್ಳಲಿಲ್ಲ. ಇಂತಹ ವಿಷಯಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವುದು ಸರಳವಲ್ಲ. ಒಂದು ವೇಳೆ ನಾನು ಆರೋಪಿಸಿದ್ರೆ ರಾಜ್‍ಕುಮಾರ್ ಹಿರಾನಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನನ್ನನ್ನು ತಪ್ಪಿತಸ್ಥೆ ಸ್ಥಾನದಲ್ಲಿ ನಿಲ್ಲಿಸುತ್ತಿದ್ರು. ಈ ಸಂಬಂಧ ಸಂಜು ಚಿತ್ರದ ನಿರ್ಮಾಪಕ ವಿಧು ವಿನೋದ್ ಚೋಪ್ರಾರಿಗೆ ಮೇಲ್ ಮೂಲಕ ದೂರು ನೀಡಿದ್ದೆ. ವಿಧು ಅವರ ಪತ್ನಿ ಅನುಪಮ ಚೋಪ್ರಾ, ಸಿನಿಮಾ ಸ್ಕ್ರಿಪ್ಟ್ ರೈಟರ್ ಅಭಿಜಿತ್ ಅವರಿಗೂ ಸಂತ್ರಸ್ತೆ ಮೇಲ್ ದೂರು ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ಮಹಿಳೆ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರಾಜ್‍ಕುಮಾರ್ ಹಿರಾನಿ ವಕೀಲರು, ಸಂತ್ರಸ್ತೆ ಎಂದು ಹೇಳಿಕೊಳ್ಳುವ ಮಹಿಳೆ ಹೇಳುವುದೆಲ್ಲ ಸುಳ್ಳು. ಆಕೆಯ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇನ್ನು ವಿಧು, ಅನುಪಮಾ ಮತ್ತು ಅಭಿಜಿತ್ ರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv