ತೆಲುಗಿನ ಖ್ಯಾತ ಡೈರೆಕ್ಟರ್ ರಾಜಮೌಳಿ (Rajamouli) ಅವರು ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದರ ನಡುವೆ ಮುಂದಿನ ಚಿತ್ರದ ಬಗ್ಗೆ ಅವರು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡೋದಾಗಿ ‘ಬಾಹುಬಲಿ’ ಡೈರೆಕ್ಟರ್ ರಾಜಮೌಳಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ
ನ್ಯಾಚುರಲ್ ಸ್ಟಾರ್ ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿ ಮಾತನಾಡಿ, ‘ಮಹಾಭಾರತ’ 3 ಭಾಗಗಳಲ್ಲಿ ಬರಲಿದೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ನೋಡಬೇಕು. ಹಾಗಾಗಿ ಬಹುಭಾಷೆಗಳಲ್ಲಿ ಮಹಾಭಾರತ ಚಿತ್ರ ಮಾಡೋದಾಗಿ ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್
ನಾನಿ ಕೂಡ ‘ಮಹಾಭಾರತ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸೋದಾಗಿ ರಾಜಮೌಳಿ ತಿಳಿಸಿದ್ದಾರೆ. ಯಾವ ಪಾತ್ರ ಎಂಬುದನ್ನು ಅವರು ಬಿಟ್ಟು ಕೊಟ್ಟಿಲ್ಲ. ತಂದೆ ವಿಜೇಂದ್ರ ಪ್ರಸಾದ್ ಅವರು 3 ಭಾಗಗಳಲ್ಲಿ ‘ಮಹಾಭಾರತ’ ತರಲು ಪ್ಲ್ಯಾನ್ ಮಾಡಿದ್ದಾರೆ. ಇದರ ಸ್ಕ್ರೀಪ್ಟ್ ಕೆಲಸವು ಕೆಲವು ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ ರಾಜಮೌಳಿ.
ಅಂದಹಾಗೆ, ಇತ್ತೀಚೆಗೆ ‘ಮಹಾಭಾರತ’ ಸಿನಿಮಾ ಮಾಡೋದು ನನ್ನ ಕನಸು ಎಂದು ಆಮೀರ್ ಖಾನ್ ಹೇಳಿದ್ದರು. ಇದೀಗ ರಾಜಮೌಳಿ ಕೂಡ ‘ಮಹಾಭಾರತ’ ಬರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಎರಡೆರಡು ಮಹಾಭಾರತ ಹೆಸರಿನಲ್ಲಿ ಸಿನಿಮಾ ಬರ‍್ತಾವಾ? ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ರಾಜಮೌಳಿ ಮತ್ತು ಆಮೀರ್ ನಡೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಇಬ್ಬರೂ ಕ್ಲ್ಯಾರಿಟಿ ಕೊಡ್ತಾರಾ ಕಾಯಬೇಕಿದೆ.