14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ ಅಕ್ಷಯ್ ಕುಮಾರ್

Public TV
1 Min Read
akshay kumar

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ನಂತರ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್ ಜೊತೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

Akshay Kumar 1

‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಸದ್ಯ ಅಕ್ಷಯ್ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ (Director Priyadarshan) ಜೊತೆ ಹಾರರ್ ಸಿನಿಮಾ ಮಾಡಲು ಅಕ್ಷಯ್ ಓಕೆ ಎಂದಿದ್ದಾರೆ.

akshay kumar 5

ಈ ಹಿಂದೆ ‘ಹೇರಾ ಪೇರಿ’, ‘ಭೂಲ್ ಭುಲಯ್ಯ’ ಚಿತ್ರಗಳು ಚಿತ್ರಮಂದಿರದಲ್ಲಿ ಸಕ್ಸಸ್ ಕಂಡಿತ್ತು. ಅಕ್ಷಯ್ ಕುಮಾರ್ ನಟಿಸಿರುವ ಸಿನಿಮಾಗೆ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದರು. 14 ವರ್ಷಗಳ ಬಳಿಕ ಅಕ್ಷಯ್‌ಗಾಗಿ ವಿಭಿನ್ನ ಕಥೆಯನ್ನು ಪ್ರಿಯದರ್ಶನ್ ರೆಡಿ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಏಕ್ತಾ ಕಪೂರ್ (Ekta Kapoor) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾದಲ್ಲಿ ಫ್ಯಾಂಟಸಿ ಇರಲಿದೆ. ಜಾದೂ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಅಂದಹಾಗೆ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ 90ಕ್ಕೂ ಹೆಚ್ಚು ಸಿನಿಮಾ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದಾರೆ. ಇವರ ಪುತ್ರಿ ಕಲ್ಯಾಣಿ (Kalyani Priyadarshan) ಕೂಡ ಚಿತ್ರರಂದಲ್ಲಿ ಸಕ್ರಿಯರಾಗಿದ್ದಾರೆ. ‘ಹೃದಯಂ’ ಚಿತ್ರದ ಮೂಲಕ ನಟಿ ಫೇಮಸ್ ಆಗಿದ್ದಾರೆ.

Share This Article