ನಟ ಮೋಹನ್ ಲಾಲ್ (Mohan Lal) ನಟನೆಯ ‘ಎಲ್ 2: ಎಂಪೂರಾನ್’ (L2: Empuraan) ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿರೋ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದೆ. ಈ ಚಿತ್ರದಲ್ಲಿನ 2002ರ ಗುಜರಾತ್ ಗಲಭೆಯ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ವಿವಾದ ಭುಗಿಲೆದ್ದ ಬೆನ್ನಲ್ಲೇ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗನನ್ನ ಬಲಿಪಶುವನ್ನಾಗಿ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ
ಸೋಷಿಯಲ್ ಮೀಡಿಯಾದಲ್ಲಿ ಪೃಥ್ವಿರಾಜ್ ತಾಯಿ ಮಲ್ಲಿಕಾ (Mallika Sukumaran) ಪೋಸ್ಟ್ ಮಾಡಿ, ಇದು ಒಬ್ಬರ ತಾಯಿ ನೋವು. ಈ ವಿವಾದದ ಬಗ್ಗೆ ಓಪನ್ ಆಗಿ ಮಾತನಾಡಿದ್ದಕ್ಕಾಗಿ ಯಾರಾದರೂ ನನ್ನನ್ನು ಗೇಲಿ ಮಾಡೋದ್ರರಲ್ಲಿ ಅರ್ಥವಿಲ್ಲ. ಪೃಥ್ವಿರಾಜ್ ವಂಚಿಸಿದ್ದಾರೆಂದು ಮೋಹನ್ ಲಾಲ್ ಆಗಲಿ ನಿರ್ಮಾಪಕರಾಗಲಿ ಹೇಳಿಲ್ಲ. ಅವರು ಎಂದಿಗೂ ಹಾಗೆ ಹೇಳುವುದಿಲ್ಲ. ಮೋಹನ್ ಲಾಲ್ ನನ್ನ ಕಿರಿಯ ಸಹೋದರನಂತೆ. ಅವರನ್ನು ನಾನು ಬಾಲ್ಯದಿಂದ ತಿಳಿದಿದ್ದೇನೆ. ಇನ್ನೂ ಪೃಥ್ವಿರಾಜ್ ಕೆಲಸವನ್ನು ಮೋಹನ್ ಲಾಲ್ ಹಲವು ಬಾರಿ ಹೊಗಳಿದ್ದಾರೆ. ಹೀಗಿರುವಾಗ ಮೋಹನ್ ಲಾಲ್‌ಗೆ ಹಾಗೂ ನಿರ್ಮಾಪಕರಿಗೆ ತಿಳಿಯದೇ ಯಾರೋ ನನ್ನ ಮಗನನ್ನು ಬಲಿಪಶುವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದು ತುಂಬಾ ದುಃಖಕರ ಸಂಗತಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:L2: Empuraan | 17 ದೃಶ್ಯಗಳಿಗೆ ಕತ್ತರಿ – ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಮೋಹನ್ ಲಾಲ್
ಪೃಥ್ವಿರಾಜ್ ಯಾರಿಗೂ ಮೋಸ ಮಾಡಿಲ್ಲ. ಪೃಥ್ವಿರಾಜ್, ಬರಹಗಾರ ಮುರಳಿ ಗೋಪಿ ಸೇರಿದಂತೆ ಚಿತ್ರದ ಪ್ರಮುಖ ಸದಸ್ಯರು ಸ್ಕ್ರೀಪ್ಟ್ ಫೈನಲ್ ಮಾಡುವಾಗ ಭಾಗಿಯಾಗಿದ್ದರು. ಈ ಚಿತ್ರದಲ್ಲಿ ಸಮಸ್ಯೆ ಇದೆ ಅನ್ನೋದಾದರೆ ಇದಕ್ಕೆ ಎಲ್ಲರೂ ಜವಾಬ್ದಾರರು. ಅವರೆಲ್ಲರೂ ಸ್ಕ್ರೀಪ್ಟ್ ಅನ್ನು ಒಟ್ಟಿಗೆ ಓದಿದ್ದರು. ಚಿತ್ರೀಕರಣದ ದೃಶ್ಯಗಳನ್ನು ಶೂಟ್ ಮಾಡಿದ್ದನ್ನು ಆಗ ಎಲ್ಲರೂ ಒಪ್ಪಿಕೊಂಡಿದ್ದರು. ಹೀಗಿರುವಾಗ ಈಗ ಪೃಥ್ವಿರಾಜ್ ಒಬ್ಬರೇ ಹೇಗೆ ಜವಾಬ್ದಾರರಾಗುತ್ತಾರೆ? ಎಂದು ನಿರ್ದೇಶಕನ ತಾಯಿ ಖಡಕ್ ಆಗಿ ಪ್ರಶ್ನಿಸಿದ್ದಾರೆ. ಇನ್ನೂ ಮೋಹನ್ ಲಾಲ್ ಹಾಗೂ ಚಿತ್ರ ನಿರ್ಮಾಪಕರಿಗೆ ತಿಳಿಯದೇ ಒಂದು ಒಂದು ಶಾಟ್ ತೆಗೆದಿಲ್ಲ ಎಂದು ಹೇಳು ಬಯಸುತ್ತೇನೆ. ಮೋಹನ್ ಲಾಲ್‌ಗೆ ತಿಳಿಯದೇ ಇರೋದು ಏನು ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಮಗ ಪೃಥ್ವಿರಾಜ್ ಪರ ಬ್ಯಾಟ್ ಬೀಸಿದ್ದಾರೆ.
ಇನ್ನೂ ಮಾರ್ಚ್ 27ರಂದು ತೆರೆ ಕಂಡ ಮೋಹನ್ ಲಾಲ್ ಅಭಿನಯದ ಎಲ್2: ಎಂಪೂರನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದೆ. ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ನಿನ್ನೆ ಯುಗಾದಿ ಹಬ್ಬ, ಇಂದು ರಂಜಾನ್ ಹಬ್ಬದ ಹಿನ್ನೆಲೆ ರಜೆ ಇರುವ ಕಾರಣ, ಹೊಸ ಆವೃತ್ತಿಯನ್ನು ಮಂಗಳವಾರ ಸೆನ್ಸಾರ್ ಮಂಡಳಿಗೆ ನೀಡಲಾಗುವುದು. ಬುಧವಾರದ ಒಳಗೆ ಎಲ್ಲ ಚಿತ್ರಮಂದಿರಗಳಲ್ಲಿ ಹೊಸ ಆವೃತ್ತಿ ತಲುಪಲಿದೆ ಎಂದು ಚಿತ್ರತಂಡ ಹೇಳಿದೆ.