ಡಿಕೆಶಿ, ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು?

Public TV
1 Min Read
prem

ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮತ್ತು ದಿನಕರ್ ತೂಗುದೀಪ್, ಡೈರೆಕ್ಟರ್ ಪ್ರೇಮ್ (Director Prem) ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪ್ರೇಮ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವಿನೀಶ್ ಸ್ಕೂಲ್ ಕುರಿತು ಮಾತನಾಡಲು ಡಿಕೆಶಿ ಅವರನ್ನು ಭೇಟಿಯಾಗಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಡಿಕೆಶಿ ಭೇಟಿಯಾದ ವಿಜಯಲಕ್ಷ್ಮಿ ದರ್ಶನ್

vijayalakshmi

ನಾನು ಆಗಾಗ ಡಿಕೆಶಿ ಅವರನ್ನು ಭೇಟಿ ಮಾಡೋಕೆ ಬರುತ್ತಲೇ ಇರುತ್ತೇನೆ. ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ದರ್ಶನ್ ಪತ್ನಿ ಮತ್ತು ದಿನಕರ್ ತೂಗುದೀಪ್ ಅವರು ಡಿಕೆಶಿ ಅವರ ಭೇಟಿಗೆ ಬಂದಿದ್ದರು. ನನ್ನ ಮಗ ಮತ್ತು ದರ್ಶನ್ ಮಗ ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ ಈಗ ಬೇರೆ ಸ್ಕೂಲ್‌ಗೆ ಶಿಷ್ಟ್ ಆಗಿದ್ದಾನೆ. ಹೀಗಾಗಿ ವಿಜಯಲಕ್ಷ್ಮಿ ಅವರು ಭೇಟಿಯಾದರು ಅಷ್ಟೇ ಎಂದು ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ.

ದರ್ಶನ್ ನನ್ನ ಸ್ನೇಹಿತ ಈ ಪೈಕಿ ಎರಡು ಮಾತಿಲ್ಲ. ಆದರೆ ಈ ಭೇಟಿಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಮಾತನಾಡಿದ್ದಾರೆ. ದರ್ಶನ್ ಪ್ರಕರಣದ ಕುರಿತು ಮಾತನಾಡೋಕೆ ಬಂದಿರಲಿಲ್ಲ ಎಂದು ಪ್ರೇಮ್ ಮಾತನಾಡಿದ್ದಾರೆ.

Share This Article