‘ಕೆಜಿಎಫ್ 2′ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ರಿಲೀಸ್ ಆಗೋದು ಯಾವಾಗ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಮಾಡೋದಾಗಿ ಜ್ಯೂ.ಎನ್‌ಟಿಆರ್ ತಿಳಿಸಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕಾಗಿ ಕುಮಟಾದಲ್ಲಿ ಬೀಡುಬಿಟ್ಟ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್

See you in cinemas on 25 June 2026…. #NTRNeel pic.twitter.com/SkMhyaF71c
— Jr NTR (@tarak9999) April 29, 2025
ಈ ಸಿನಿಮಾಗೆ ತಾತ್ಕಾಲಿಕವಾಗಿ #NTRNeel ಎಂದು ಟೈಟಲ್ ಇಡಲಾಗಿದೆ. ಸದ್ಯ ಈ ಚಿತ್ರದ ಶೂಟಿಂಗ್ ಕರ್ನಾಟಕದ ಕುಮಟಾದಲ್ಲಿ ನಡೆಯುತ್ತಿದೆ. ಅದಕ್ಕಾಗಿ ಚಿತ್ರತಂಡದ ಜೊತೆ ಜ್ಯೂ.ಎನ್‌ಟಿಆರ್ ಕುಮಟಾದಲ್ಲಿ ತಂಗಿದ್ದಾರೆ.
ಅಂದಹಾಗೆ, ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ‘ಜನ ನಾಯಗನ್’ ಎದುರು 2026ರ ಸಂಕ್ರಾಂತಿಯಂದು ತಾರಕ್ ಸಿನಿಮಾ ಕೂಡ ಬರಲಿದೆ ಎನ್ನಲಾಗಿತ್ತು. ಈ ಚಿತ್ರದ ಮುಂದೆ ಕ್ಲ್ಯಾಶ್ ಆಗಲಿದೆ ಎಂದು ವರದಿ ಆಗಿತ್ತು. ಇದೀಗ ಜ್ಯೂ.ಎನ್‌ಟಿಆರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.


