ಬೆಂಗಳೂರು: ಪನ್ನಗಾಭರಣ ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಸೈಮಾ ಅವಾರ್ಡ್‍ನಲ್ಲಿ ಕಾಣಿಸಿಕೊಂಡಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಾಗಿದೆ.
ಇಂದು ನನ್ನ ಪ್ರೀತಿಯ ಗೆಳೆಯನ ಫೋಟೋ ಇರುವ ಬಟ್ಟೆಯನ್ನು ಧರಿಸಿದ್ದೇನೆ, ಸ್ನೇಹಿತ ನನ್ನ ಅದೃಷ್ಟ ಎಂದು ಬರೆದುಕೊಂಡ ಪನ್ನಗಭರಣ ಸೈಮಾ ಅವಾರ್ಡ್‍ನಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿ ನೀವು ನಿಜವಾದ ಸ್ನೇಹಿತರು, ಉತ್ತಮ ಗೆಳೆಯರು, ನಿಮ್ಮ ಅಂತಹ ಸ್ನೇಹಿತರು ಇರಲು ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡುತ್ತಾ ಇಬ್ಬರ ನಡುವೆ ಇರುವ ಸ್ನೇಹವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು
View this post on Instagram
ಅಂತಿಮವಾಗಿ ಅದೃಷ್ಟ ಮತ್ತು ಶಕ್ತಿ ನಮ್ಮ ಕಡೆ ಇತ್ತು. ಫ್ರೆಂಚ್ ಬಿರಿಯಾನಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ 2020 ಅವಾರ್ಡ್ ಸಿಕ್ಕಿದೆ. ಕನಸು ನನಸಾಯಿತು. ನನ್ನ ಇಡೀ ಚಿತ್ರತಂಡ, ಸಿಬ್ಬಂದಿಗೆ ಧನ್ಯವಾದಗಳು. ನನ್ನ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡು ಅವಾರ್ಡ್ ಬಂದಿರುವ ಸಂತೋಷವನ್ನು ಪನ್ನಗಾಭರಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ
View this post on Instagram
ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಪನ್ನಗಾಭರಣ ತುಂಬಾನೇ ಆಪ್ತರಾಗಿದ್ದರು. ಅವರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ಚಿರು ಅಕಾಲಿಕ ಮರಣ ಹೊಂದಿದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪನ್ನಗಾಭರಣ ಅವರು ತುಂಬಾನೇ ನೊಂದುಕೊಂಡರು. ಈಗ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪನ್ನಗಾಭರಣ ಅವರು ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
View this post on Instagram
ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್‍ವುಡ್‍ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪನ್ನಗಾಭರಣ ಅವರು ತೊಟ್ಟಿರುವ ಬಟ್ಟೆ ಮೇಲೆ ಇರುವ ಚಿರು ಫೋಟೋ ಎಲ್ಲರ ಗಮನ ಸೆಳೆದಿದೆ.