ರಾಷ್ಟ್ರ ಪ್ರಶಸ್ತಿ ಗೆದ್ದ ಕೋಡಳ್ಳಿ ಶಿವರಾಮ್ ವಿಧಿವಶ

Public TV
1 Min Read
kodalli shivaram

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕಿಂಗ್ ಸುದ್ದಿ ಸಿಕ್ಕಿದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗೆದ್ದ ಕೋಡಳ್ಳಿ ಶಿವರಾಮ್ (Kodalli Shivaram) ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ನಿಧನಕ್ಕೆ ನಟ,ನಟಿಯರು ಸಂತಾಪ ಸೂಚಿಸಿದ್ದಾರೆ.

ಸೆ.17ರ ರಾತ್ರಿ ಕೋಡಳ್ಳಿ ಶಿವರಾಮ್ ಅವರು ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು (ಸೆ.18) ನೆರವೇರಿದೆ. ಇದನ್ನೂ ಓದಿ:ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್

1978ರಲ್ಲಿ ಬಿಡುಗಡೆಯಾದ ‘ಗ್ರಹಣ’ ಹೆಸರಿನ ಚಿತ್ರಕ್ಕೆ ಕೋಡಳ್ಳಿ ಶಿವರಾಮ್ ಅವರೇ ಕಥೆ ಬರೆದಿದ್ರು. ಈ ಚಿತ್ರವನ್ನು ಟಿ.ಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದಿಂದ ಅವರಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಕೋಡಳ್ಳಿ ಶಿವರಾಮ್ ಅವರು ನಿರ್ದೇಶನದ ಮೂಲಕ ಕೂಡ ಗಮನ ಸೆಳೆದಿದ್ದರು.

Share This Article