‘ಬೃಂದಾವನ’ ಚಿತ್ರೀಕರಣದ ವೇಳೆ, ಕುದುರೆ ಮೇಲಿಂದ ಬಿದ್ದಿದ್ದ ದರ್ಶನ್
ಇದೇ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದ ನಟ
Advertisement
ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್ (Darshan) ಚಿಕಿತ್ಸೆಗಾಗಿ ಇಂದು (ನ.1) ಬೆಂಗಳೂರಿನ ಕೆಂಗೇರಿ ಬಳಿಯಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದೇಕೆ ಎಂಬುದಕ್ಕೆ ಕಾರಣ ಇಲ್ಲಿದೆ. ‘ಬೃಂದಾವನ’ (Brindavana) ಚಿತ್ರೀಕರಣದ ವೇಳೆ, ದರ್ಶನ್ ಕುದುರೆ ಮೇಲಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. 2014ರಲ್ಲಿ ಇದೇ BGS ಆಸ್ಪತ್ರೆಯಲ್ಲಿ ನಟ ದಾಖಲಾಗಿದ್ದರು. ಹಾಗಾದ್ರೆ ಅಂದು ಶೂಟಿಂಗ್ ವೇಳೆ, ಏನಾಗಿತ್ತು? ಎಂಬುದನ್ನು ಚಿತ್ರದ ನಿರ್ದೇಶಕ ಕೆ.ಮಾದೇಶ್ (K.Madesha) ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.
Advertisement
Advertisement
2014ರಲ್ಲಿ ‘ಬೃಂದಾವನ’ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಚಿತ್ರತಂಡ ತೆರಳಿದ್ದರು. ಅಲ್ಲಿ ವಿಪರೀತ ಮಳೆ ಇದ್ದ ಕಾರಣ ಒಂದೇ ಸಾಂಗ್ ಅನ್ನು ಶೂಟಿಂಗ್ ಮಾಡಲಾಯಿತು. ಆ ಸಾಂಗ್‌ನಲ್ಲಿ ಅವರು ಕುದುರೆ ಮೇಲೆ ಬರುವ ಸೀನ್ ಇರುತ್ತದೆ. ಶೂಟಿಂಗ್ ವೇಳೆ, ಕುದುರೆ ಸ್ಲಿಪ್ ಆಗಿತ್ತು ಆದರಿಂದ ದರ್ಶನ್ ಮೇಲಿಂದ ಕೆಳಗೆ ಬಿದ್ದು ಬೆನ್ನು ಮತ್ತು ಕೈ ಕಾಲಿಗೆ ಏಟು ಆಗಿತ್ತು. ನಾವು ಅಲ್ಲಿನ ಸ್ಥಳೀಯ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ವಿ ಎಂದು ಕೆ. ಮಾದೇಶ್ ಅವರು ತಿಳಿಸಿದ್ದಾರೆ.
Advertisement
ಆಗ ಅಲ್ಲಿ ಸಿಕ್ಕಾಪಟ್ಟೆ ಚಳಿ ಬೇರೆ ಇತ್ತು. ಮುಂದೆ ಶೂಟಿಂಗ್ ಹೇಗೆ ಮಾಡೋದು ಎಂದು ಚಿಂತೆಯಲ್ಲಿದ್ವಿ. ಆದರೆ ಮರುದಿನ ಅವರೇ ಶೂಟಿಂಗ್ ಮಾಡೋಣ ತುಂಬಾ ದೂರ ಬೇರೆ ಬಂದಿದ್ದೇವೆ ಎಂದು ತಂಡಕ್ಕೆ ಬೆಂಬಲ ಕೊಟ್ಟರು. ಆ ಸಾಂಗ್ ಶೂಟಿಂಗ್ ಅನ್ನು ಅಂದೇ ಮುಗಿಸಿ ಕೊಟ್ಟರು. ಆ ನಂತರ ಬೆಂಗಳೂರಿಗೆ ಬಂದ್ಮೇಲೆ BGS ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ.
ಇದೀಗ ಅದೇ ಬಿಜಿಎಸ್ ಆಸ್ಪತ್ರೆಯಲ್ಲಿ 2ನೇ ಬಾರಿಗೆ ದರ್ಶನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ‘ಬೃಂದಾವನ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಪೆಟ್ಟಾದ ವೇಳೆ, ಇದೇ ಆಸ್ಪತ್ರೆಯಲ್ಲಿ 4 ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು.