ಪಿ.ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ (Samarjit Lankesh) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಸಮರ್ಜಿತ್ ಚೊಚ್ಚಲ ಸಿನಿಮಾಗೆ ಹೀರೋಯಿನ್ ಆಗಿ ಬಿಗ್ ಬಾಸ್ (Bigg Boss) ಬೆಡಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ (Gowri) ಎಂದು ಟೈಟಲ್ ಫಿಕ್ಸ್ ಆಗಿದೆ. ಇದೇ ಆಗಸ್ಟ್ 31ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಮಗನ ಮೊದಲ ಸಿನಿಮಾಗೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನ ಮಾಡ್ತಿದ್ದಾರೆ. ‘ಗೌರಿ’ (Gowri) ಸಿನಿಮಾ ಸಲುವಾಗಿ ಸಮರ್ಜಿತ್ ಲಂಕೇಶ್ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ಸ್ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಈಗಾಗಲೇ ಹೈಲೈಟ್ ಆಗಿವೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್ 31ರಂದು ಬೆಳಗ್ಗೆ 10:30ಕ್ಕೆ ಗೌರಿ ಸಿನಿಮಾದ ಮುಹೂರ್ತ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಇದನ್ನೂ ಓದಿ:‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!
ಈ ಸಿನಿಮಾಗಾಗಿ ಸಮರ್ಜಿತ್ ಲಂಕೇಶ್ ಅವರು ಡ್ಯಾನ್ಸ್, ಫೈಟಿಂಗ್, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅವರಿಗೆ ಅನುಭವ ಇದೆ. ಗೌರಿ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್‌ಗೆ ಜೋಡಿಯಾಗಿ ಸಾನ್ಯ ಅಯ್ಯರ್ ಅವರು ನಟಿಸಲಿದ್ದಾರೆ. ಇವರಿಬ್ಬರ ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಅಷ್ಟಕ್ಕೂ ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ ಈ ಪ್ರಶ್ನೆಗೆ ಮುಹೂರ್ತದ ಸಂದರ್ಭದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.
ಸಮರ್ಜಿತ್- ಸಾನ್ಯ ಅಯ್ಯರ್ (Saanya Iyer) ಇಬ್ಬರಿಗೂ ಮೊದಲ ಸಿನಿಮಾ ಆಗಿರುವ ಕಾರಣ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕು ಎಂದು ಕನಸು ಕಂಡಿದ್ದ ಸಾನ್ಯಗೆ ಇದೀಗ ಸೂಕ್ತ ಕಥೆಯೊಂದು ಸಿಕ್ಕಿದೆ.