ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಮೊದಲೇ ಹಗ್ಗ, ಕರ್ಟನ್ ಖರೀದಿಸಿದ್ದರು ಎಂಬ ಮಾಹಿತಿಯು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹಲವು ಅನುಮಾನಗಳಿಗೆ ಕಾರಣವಾಗಿರುವ ನಡುವೆ ಕೆಲವೊಂದು ಕುತೂಹಲಕರವಾದ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರಿಗೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಗೊತ್ತಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದ ಗುರುಪ್ರಸಾದ್, ಹೊಸದಾಗಿ ಹಗ್ಗ ಖರೀದಿ ಮಾಡಿದ್ದರಂತೆ. ಹಾಗೇ ಹಗ್ಗ ಖರೀದಿ ಮಾಡಿಕೊಂಡು ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ಕರ್ಟನ್‌ಗಳು ಹಾಕಿ ಕವರ್ ಮಾಡಿದ್ದಾರೆ. ನಂತರ ಮನೆಯ ಬಾಗಿಲಿನ ಒಳಗಿನಿಂದಲೇ ಚಿಲಕ ಹಾಕಿ ಅಲ್ಲೇ ಇದ್ದ ದಿವಾನ್ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ಚಾಮರಾಜನಗರ| ‘ಮಿಸ್ಟರ್ ಬಿಆರ್‌ಟಿ’ ಎಂದೇ ಹೆಸರಾಗಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವು
Advertisement
Advertisement
ಗುರುಪ್ರಸಾದ್ ಆತ್ಮಹತ್ಯೆಗೆ ಆರ್ಥಿಕ ಕಾರಣಗಳೇನಾದರು ಇದೆಯಾ ಅಥವಾ ವೈಯಕ್ತಿಕ ಕಾರಣಗಳಾ ಅನ್ನುವ ವಿಚಾರಕ್ಕೂ ತನಿಖೆ ನಡೆಯುತ್ತಿದೆ. ಅದರ ಜೊತೆಗೆ ಆತ್ಮಹತ್ಯೆ ನಡೆದಿದ್ದು ಯಾವಾಗ ಅನ್ನುವುದಕ್ಕೂ ಉತ್ತರ ಸಿಕ್ಕಿದೆ. ಗುರುಪ್ರಸಾದ್, ಕಳೆದ ಅ.29ರಂದು ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಆ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಫ್ಲಾಟ್‌ಗೆ ಅ.29ರಂದು ಸಂಜೆ ಹೋಗಿರುವುದನ್ನು ಅಲ್ಲಿನ ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ವೇಳೆಯೂ, ಗುರುಪ್ರಸಾದ್ ಅ.29ರ ರಾತ್ರಿ 7-8 ಗಂಟೆ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ 16 ವರ್ಷಗಳ ಬಳಿಕ ಪೂರ್ಣಗೊಂಡ ಹೊಸ ಜಲಾಶಯ
Advertisement
Advertisement
ಈ ನಡುವೆ, ಗುರುಪ್ರಸಾದ್ ನಾಲ್ಕು ಮೊಬೈಲ್‌ಗಳನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಆ ನಾಲ್ಕು ಮೊಬೈಲ್‌ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೆಲ ಡಿಲಿಟೇಡ್ ಮಸೇಜ್‌ಗಳು ಕೂಡ ಪತ್ತೆಯಾಗಿವೆ. ಕೊನೆಯ ಬಾರಿಗೆ ಯಾರು ಸಂಪರ್ಕ ಮಾಡಿದ್ದರು? ಹಣಕಾಸಿನ ವಿಚಾರವಾ? ಬೇರೆ ಏನಾದರೂ ಕಾರಣ ಇದೆಯಾ ಅನ್ನುವುದು ತನಿಖೆಯ ನಂತರವೇ ತಿಳಿಯಬೇಕಿದೆ. ಇದನ್ನೂ ಓದಿ: Kanpur| ಖಾಸಗಿ ಆಸ್ಪತ್ರೆ ನಿರ್ದೇಶಕನಿಂದ 22 ವರ್ಷದ ನರ್ಸ್ ಮೇಲೆ ಅತ್ಯಾಚಾರ