ಕಾರವಾರ: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಶರಣಾಗಿದ್ದು, ಈ ಹಿಂದೆ ಅವರು ಮಾಡಿದ್ದ ಮಾನವೀಯ ಕಾರ್ಯವೊಂದು ಜನರ ಮೆಚ್ಚುಗೆಗೆ ಕಾರಣವಾಗಿದೆ.
Advertisement
ಕಾರವಾರದಲ್ಲಿ (Karwar) ಈ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಮಾನಸಿಕ ಖಿನ್ನತೆಗೊಳಗಾಗಿ (Depression) ಬೀದಿ ಸುತ್ತುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರು ಧೈರ್ಯ ತುಂಬಿದ್ದರು. ಅಲ್ಲದೇ ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು.
Advertisement
Advertisement
2016ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರದ ಶೂಟಿಂಗ್‌ಗೆ ಅವರು ಬಂದಿದ್ದರು. ಈ ವೇಳೆ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎಂಬ ವ್ಯಕ್ತಿ ಖಿನ್ನತೆಗೊಳಗಾಗಿ, ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದರು. ಅವರನ್ನು ನೋಡಿ ಮರುಗಿದ್ದ ಗುರುಪ್ರಸಾದ್, ಬಳಿಗೆ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದರು.
Advertisement
ಚಿತ್ರೀಕರಣದ ವೇಳೆ ಆತನನ್ನು ಕೆಲಸಕ್ಕೆ ಸಹ ಸೇರಿಸಿಕೊಂಡಿದ್ದರು. ಈ ಮೂಲಕ ಆತನಿಗೆ ಧೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು.