ಸ್ಯಾಂಡಲ್‌ವುಡ್‌ನಲ್ಲಿ ‘ಕೆಂಡಸಂಪಿಗೆ’ (Kendasampige) ಸಿನಿಮಾ ಕಮಾಲ್ ಮಾಡಿತ್ತು. ಇದೀಗ ಪ್ರೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ‘ಕಾಗೆ ಬಂಗಾರ’ (Kaagebangara) ಎಂದು ಟೈಟಲ್ ಕೂಡ ಇಡಲಾಗಿದೆ. ಹೊಸ ಪ್ರತಿಭೆಗಳಿಗೆ ದುನಿಯಾ ಸೂರಿ (Duniya Suri) ಟೀಮ್ ಅವಕಾಶ ನೀಡಿದ್ದಾರೆ. ಜೊತೆಗೆ ಸಿನಿಮಾದ ಮುಹೂರ್ತ ಕೂಡ ನಿಗದಿಯಾಗಿದೆ.
9 ವರ್ಷಗಳ ಹಿಂದೆ ‘ಕೆಂಡಸಂಪಿಗೆ’ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದರು. ಇದರ ಪ್ರೀಕ್ವೆಲ್ ಅಥವಾ ಸೀಕ್ವೆಲ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ. ‘ಕಾಗೆ ಬಂಗಾರ’ ಎಂಬ ಟೈಟಲ್ ಮೂಲಕ ವಿಭಿನ್ನ ಕಥೆಯನ್ನು ಹೇಳೋದಕ್ಕೆ ದುನಿಯಾ ಸೂರಿ ರೆಡಿಯಾಗಿದ್ದಾರೆ. ಇದನ್ನೂ ಓದಿ:10 ವರ್ಷಗಳಲ್ಲಿ ಭಾರತ ಅದ್ಭುತ ಅಭಿವೃದ್ಧಿಯನ್ನು ಸಾಧಿಸಿದೆ- ‘ನಮೋ’ ಸಾಧನೆ ಹೊಗಳಿದ ರಶ್ಮಿಕಾ ಮಂದಣ್ಣ
ಈ ಬಾರಿ ‘ಕಿಸ್’ ಖ್ಯಾತಿಯ ವಿರಾಟ್‌ಗೆ (Viraat) ದುನಿಯಾ ವಿಜಯ್ ಮಗಳು ರಿತನ್ಯಾರನ್ನು (Rithanya Vijay) ನಾಯಕಿಯಾಗಿ ತೋರಿಸೋದ್ದಕ್ಕೆ ದುನಿಯಾ ಸೂರಿ ಹೊರಟಿದ್ದಾರೆ. ಇದೇ ಜೂನ್‌ನಲ್ಲಿ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ಜರುಗಲಿದೆ. ಅಂದಹಾಗೆ, ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ.
ಅಂದು ದುನಿಯಾ ಸಿನಿಮಾ ಮೂಲಕ ವಿಜಯ್‌ಗೆ ಸಕ್ಸಸ್ ಸಿಕ್ಕಿತ್ತು. ಇಂದು ಅವರ ಮಗಳು ರಿತನ್ಯಾ ವಿಜಯ್‌ಗೆ ದುನಿಯಾ ಸೂರಿ ಟೀಮ್ ಅವಕಾಶ ಕೊಟ್ಟಿದೆ. ಈ ಸಿನಿಮಾದ ಮೂಲಕ ರಿತನ್ಯಾ ನಾಯಕಿಯಾಗಿ ಗೆದ್ದು ಬೀಗುತ್ತಾರಾ ಎಂದು ಕಾದುನೋಡಬೇಕಿದೆ. ವಿರಾಟ್ ಮತ್ತು ರಿತನ್ಯಾ ಈ ಹೊಸ ಜೋಡಿಯ ಪ್ರೇಮ ಕಥೆ ನೋಡೋದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.