143 ಎಂಬ ಸಿನಿಮಾ ನಿರ್ದೇಶಿಸಿ ಚಂದನವನದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಕಾಂತ್, ತ್ರಿಕೋನ ಸಿನಿಮಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾ ಟ್ರೇಲರ್ ಜೊತೆಗೆ ಸ್ಟಾರ್ ತಾರಬಳಗದ ಮೂಲಕ ಸಖತ್ ಸುದ್ದಿಯಲ್ಲಿದೆ.
‘ತ್ರಿಕೋನ’ ಸಿನಿಮಾದ ಕಥೆ ಎಷ್ಟು ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ತಾರಬಳಗವೂ ಅಷ್ಟೇ ಪರ್ಫೆಕ್ಟ್ ಆಗಿದೆ. ಬಹುತೇಕ ಸ್ಟಾರ್ ಪೋಷಕ ನಟರೇ ಅಭಿನಯಿಸಿರುವ ಈ ಚಿತ್ರದಲ್ಲಿ ಮೂರು ಜನರೇಷನ್ ಕಥೆ ಹೇಳ ಹೊರಟಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಇಂಟ್ರಸ್ಟಿಂಗ್ ಫ್ಯಾಕ್ಟರ್ ಏನಪ್ಪ ಅಂದರೆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ ಹಾಗೂ ಹಿರಿಯ ನಟ ಸುರೇಶ್ ಹೆಬ್ಳಿಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್ ಎವರ್ ಗ್ರೀನ್ ಸಿನಿಮಾ ಪಲ್ಲವಿ ಅನುಪಲ್ಲವಿಯಲ್ಲಿ ನಟಿಸಿದ್ದ ಇವರು ಮೂರು ದಶಕದ ನಂತರ ಅದರಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿದು. ಇದನ್ನೂ ಓದಿ: ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ
ಚಿತ್ರದಲ್ಲಿ 25, 45, 65 ಹೀಗೆ ಮೂರು ವಯೋಮಾನದವರ ಕಥೆ ಇದೆ. ಈ ಮೂರು ವಯೋಮಾನವು ಚಿತ್ರದಲ್ಲಿ ಶಕ್ತಿ, ಅಹಂ, ತಾಳ್ಮೆಯನ್ನು ಪ್ರತಿನಿಧಿಸುತ್ತವೆ. ರಾಜ್ ವೀರ್, ಮಾರುತೇಶ್ 25 ವರ್ಷದವರನ್ನು ಚಿತ್ರದಲ್ಲಿ ಪ್ರತಿನಿಧಿಸಿದರೆ, ಅಚ್ಯುತ್ ಕುಮಾರ್, ಸುಧಾರಾಣಿ 45, ಲಕ್ಷ್ಮಿ, ಸುರೇಶ್ ಹೆಬ್ಳಿಕರ್ 65ರ ವಯೋಮಾನದವರನ್ನು ಪ್ರತಿನಿಧಿಸುವ ಪಾತ್ರವನ್ನು ನಿಭಾಯಿಸಿದ್ದಾರೆ. ಬದುಕಿನಲ್ಲಿ ಕಷ್ಟಗಳು ಎದುರಾದಾಗ ಶಕ್ತಿ, ಅಹಂ, ತಾಳ್ಮೆ ಮೂಲಕ ಮೂರು ವಯೋಮಾನದವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ, ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದೇ ಚಿತ್ರದ ಒನ್ ಲೈನ್ ಕಹಾನಿ. ಇದನ್ನೂ ಓದಿ: ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು
ಬರ್ಫಿ, ಪೆರೋಲ್ ಸಿನಿಮಾ ನಿರ್ದೇಶನ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ರಾಜ್ ಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜೀವನ್ ಪ್ರಕಾಶ್ ಸಂಕಲನ, ಶ್ರೀನಿವಾಸ್ ವಿನ್ನಕೋಟ ಕ್ಯಾಮೆರಾ ವರ್ಕ್, ಸುರೇಂದ್ರನಾಥ್ ಸಂಗೀತ ಸಂಯೋಜನೆ ಇದೆ. ಏಪ್ರಿಲ್ 8ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.