ಬೇರ್‍ಯಾವುದೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ, ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ವಿಪುಲ ಅವಕಾಶವಿದ್ದರೂ ಕೈ ಬೀಸಿ ಕರೆಯೋ ಮಾಯೆ ಸಿನಿಮಾ ರಂಗ. ಒಂದು ಬಾರಿ ಸಿನಿಮಾ ಕನಸು ಹಬ್ಬಿಕೊಂಡರೆ ಅದು ಯಾವ ಘಳಿಗೆಯಲ್ಲಾದರೂ ಬರಸೆಳೆಯದೇ ಬಿಡುವುದಿಲ್ಲ. ಈ ಕಾರಣದಿಂದಲೇ ಐಟಿ ಕ್ಷೇತ್ರದಿಂದ ಆಗಾಗ ಒಂದಷ್ಟು ಪ್ರತಿಭಾನ್ವಿತರ ಆಗಮನವಾಗುತ್ತಿರುತ್ತದೆ. ಇದೀಗ ಅದೇ ಕ್ಷೇತ್ರದಿಂದ ಬಂದಿರುವ ಭರತ್ ವರ್ಷ ಅವರು ‘ಇಂಟರ್ವಲ್’ (Interval Film) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರವೀಗ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ದಾಟಿಕೊಂಡಿದೆ. ಹೀಗೆ ಪ್ರೇಕ್ಷಕರ ಮನ ಗೆದ್ದಿರುವ ಯುವ ಆವೇಗದ ಕಥೆ ಹೊಂದಿರೋ ಇಂಟರ್ವಲ್ ಚಿತ್ರದ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಭರತ್ ವರ್ಷ (Bharath Varsha) ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಾನ್ಯಾಕೆ 2ನೇ ಮದುವೆಯಾಗಿಲ್ಲ: ಸೀಕ್ರೆಟ್ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ
ಇಲ್ಲಿ ಮೂವರು ಮಿಡಲ್ ಕ್ಲಾಸ್ ಹುಡುಗರ ಬಾಳ ಪಯಣದ ಕಥೆ ಇದೆ. ಸಾಮಾನ್ಯವಾಗಿ ಇಪ್ಪತ್ತೆಂಟರಾಚೆ ವಯಸ್ಸು ಮಗುಚಿಕೊಂಡ ಘಳಿಗೆ ಮಧ್ಯಮ ವರ್ಗದ ಹುಡುಗರನ್ನು ಕಾಡುವ ರೀತಿಯೇ ಬೇರೆಯದ್ದಿದೆ. ಇಂಥಾ ಹಂತದಲ್ಲಿ ಎಲ್ಲರ ಬದುಕಿನಲ್ಲೂ ಇಂಟರ್ವಲ್ ಒಂದು ಎದುರಾಗುತ್ತೆ. ಅಂಥಾ ಸೂಕ್ಷ್ಮ ಕಥಾನಕವನ್ನು ಹೊಂದಿರುವ ಈ ಚಿತ್ರವನ್ನು ಎಲ್ಲಿಯೂ ಮನೋರಂಜನೆಗೆ ಕೊರತೆಯಾಗದಂತೆ ಕಟ್ಟಿ ಕೊಡಲಾಗಿದೆ. ಹಾಗಂತ ಇದನ್ನು ಬರೀ ಮಧ್ಯಮ ವರ್ಗದ ಹುಡುಗರ ತಮಾಷೆಯ ಕಥೆ ಅಂದುಕೊಳ್ಳುವಂತಿಲ್ಲ. ಇಲ್ಲಿ ಲವ್ವು, ಸೆಂಟಿಮೆಂಟು, ಫ್ಯಾಮಿಲಿ ಕಥೆ ಎಲ್ಲವೂ ಇದೆ. ಆದರೆ, ಘನ ಗಂಭೀರವಾದ ವಿಚಾರವನ್ನೂ ಕೂಡ ಹಾಸ್ಯದ ಧಾಟಿಯಲ್ಲಿಯೇ ಪ್ರೇಕ್ಷಕರನ್ನು ತಲುಪಿಸುವಂತೆ ಭರತ್ ವರ್ಷ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಏ.22ರಿಂದ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾದ ಶೂಟಿಂಗ್ ಶುರು
- Advertisement
View this post on Instagram
- Advertisement
ಕಾಮಿಡಿ ಫ್ಯಾಮಿಲಿ ಡ್ರಾಮಾ ಜಾನರ್‌ಗೆ ಸೇರುವ ಈ ಸಿನಿಮಾವನ್ನು ವರ್ಷಗಟ್ಟಲೆ ಶ್ರಮವಹಿಸಿ, ಗಟ್ಟಿ ಕಥೆಯ ಮೂಲಕ ಭರತ್ ವರ್ಷ ರೂಪಿಸಿದ್ದಾರೆ. ಇದರ ಚಿತ್ರೀಕರಣಕ್ಕಾಗಿ ದೃಶ್ಯಗಳು ಕಳೆಗಟ್ಟುವ ಲೊಕೇಷನ್‌ಗಾಗಿ ಚಿತ್ರತಂಡ ಬಹುವಾಗಿ ಹುಡುಕಾಟ ನಡೆಸಿತ್ತು. ಕಡೆಗೂ ಶಿವಮೊಗ್ಗದ ಹಬೀಬ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಮುಂತಾದ ಚೆಂದದ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೇವಲ ಕಥೆ, ಸ್ಕ್ರಿಫ್ಟ್ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಈ ಸಿನಿಮಾ ಹೊಸತನದಿಂದ ಕೂಡಿದೆಯಂತೆ. ಹೊಸಬರು ರೂಪಿಸಿರೋ ಸಿನಿಮಾ ಎಂಬ ಸುಳಿವೇ ಸಿಗದಂತೆ ಇಂಟರ್ವಲ್ ಕಳೆಗಟ್ಟಿಕೊಂಡಿದೆಯಂತೆ. ಸಾಮಾನ್ಯವಾಗಿ ಇಂಜಿನಿಯರಿಂಗ್ ಸೇರಿದಂತೆ ಯಾವ ಪದವಿ ಪಡೆದುಕೊಂಡು ಬಂದರೂ ಕೂಡ ಕೆಲಸ ಹುಡುಕುವ ಹಾದಿಯಲ್ಲಿ ಪಡಿಪಾಟಲು ತಪ್ಪಿದ್ದಲ್ಲ.
ಅಂಥಾದ್ದನ್ನು ಅತ್ಯಂತ ಆಪ್ತವಾವೆನ್ನಿಸುವಂತೆ ಆ ಘಟ್ಟವನ್ನು ದಾಟಿಕೊಂಡು ಬಹುದೂರ ಸಾಗಿದವರನ್ನೂ ತಿರುಗಿ ನೋಡುವಂತೆ ಮಾಡಬಲ್ಲ ಗುಣ ಇಲ್ಲಿನ ದೃಶ್ಯಗಳಿಗಿದೆ ಅನ್ನೋದು ಭರತ್ ವರ್ಷ ಅವರ ಭರವಸೆ. ಅದೀಗ ನಿಜವಾಗಿದೆ. ಅದರ ಫಲವಾಗಿಯೇ ಈ ಸಿನಿಮಾ 25 ದಿನಗಳನ್ನು ಪೂರೈಸಿಕೊಂಡು, ಮತ್ತಷ್ಟು ಹುರುಪಿನಿಂದ ಪ್ರದರ್ಶನ ಕಾಣುತ್ತಿದೆ. ಹೊಸಬರ ಸಿನಿಮಾಗಳಿಗೆ ನಾನಾ ಎಡರು ತೊಡರುಗಳು ಎದುರಾಗುತ್ತವೆ. ಇಂಟರ್ವಲ್ ಚಿತ್ರತಂಡಕ್ಕೂ ಅಂಥಾದ್ದೆಲ್ಲವೂ ಎದುರುಗೊಂಡಿದ್ದವು. ಆದರೆ ಗಟ್ಟಿ ಕಥೆಯ ಕಾರಣದಿಂದಲೇ ಇಂಟರ್ವಲ್ ನೆಲೆ ಕಂಡುಕೊಂಡಿದೆ. ಕನ್ನಡದ ಪ್ರೇಕ್ಷಕರು ಒಂದೊಳ್ಳೆ ಚಿತ್ರವನ್ನು ಉಳಿಸಿಕೊಂಡಿದ್ದಾರೆ.