ಐಪಿಎಸ್ ಅಧಿಕಾರಿ ರೂಪಾ ಬಗ್ಗೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ರಮೇಶ್

Public TV
1 Min Read
ROOPA CINIMA

ಬೆಂಗಳೂರು: ಅಟ್ಟಹಾಸ, ಸೈನೈಡ್ ಹೀಗೆ ನೈಜಕಥೆಗಳ ಆಧಾರಿತ ಸಿನಿಮಾ ಮಾಡಿರುವ ನಿರ್ದೇಶಕ ಎಎಂಆರ್ ರಮೇಶ್ ಇದೀಗ ಡಿ. ರೂಪ ಅವರ ಜೀವನಾಧರಿತ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ.

ಇತ್ತಿಚೆಗಷ್ಟೇ ಐಪಿಎಸ್ ಅಧಿಕಾರಿ ಡಿ. ರೂಪಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಆಪ್ತೆ ಶಶಿಕಲಾಗೆ ಸಿಗ್ತಿದ್ದ ಐಷಾರಾಮಿ ಸೌಲಭ್ಯಗಳು ಸೇರಿದಂತೆ ಹಲವು ಭ್ರಷ್ಟಾಚಾರವನ್ನು ಬಯಲು ಮಾಡಿದ್ರು. ನಂತರ ರೂಪಾ ವರ್ಗಾವಣೆಯಾದ್ರು. ರೂಪಾ ಈಗ ದೇಶಾದ್ಯಂತ ಸುದ್ದಿಯಾಗಿ ಒಂದು ರೀತಿ ಸೆಲೆಬ್ರಿಟಿ ಆಗಿದ್ದಾರೆ. ಹೀಗಾಗಿ ರೂಪಾ ಜೀವನ ಕಥೆ ಆಧಾರಿತ ಸಿನಿಮಾಕ್ಕೆ ಎಎಂಆರ್ ರಮೇಶ್ ರೆಡಿಯಾಗಿದ್ದು, ರೂಪ ಅವರ ಗ್ರೀನ್ ಸಿಗ್ನಲ್‍ಗಾಗಿ ಕಾಯುತ್ತಿದ್ದಾರೆ. ರೂಪ ಪಾತ್ರಕ್ಕೆ ಇನ್ನಷ್ಟೇ ನಾಯಕಿ ಆಯ್ಕೆ ಆಗಬೇಕಿದೆ.

ಈ ಸಿನಿಮಾ ಸಂಬಂಧ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ಈಗಾಗಲೇ ಚರ್ಚಿಸಿದ್ದು, ಜುಲೈ 29ರಂದು ಮತ್ತೊಮ್ಮೆ ಈ ಬಗ್ಗೆ ಚರ್ಚಿಸಲಿದ್ದೇನೆ. ಅಲ್ಲದೇ ಸಿನಿಮಾದ ಟೈಟಲ್ ನಲ್ಲಿ ರೂಪಾ ಅವರ ಹೆಸರು ಇರುವುದರಿಂದ ಅವರನ್ನು ಕೂಡ ಮಾತನಾಡಿಸಲಿದ್ದೇನೆ ಅಂತ ರಮೇಶ್ ಹೇಳಿದ್ದಾರೆ.

ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ದೇಶಿಸಲು ಚಿಂತಿಸಿರುವುದಾಗಿ ಅವರು ಹೇಳಿದ್ದಾರೆ.

ROOPA 2

ROOPA 1

JAIL

Share This Article