ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajanikanth) ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದಾರೆ. ‘ಲಾಲ್ ಸಲಾಂ’ (Lal Salam) ಸಿನಿಮಾ ಮಕಾಡೆ ಮಲಗಿದ ಬೆನ್ನಲ್ಲೇ ಐಶ್ವರ್ಯ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದೆ. ಧನುಷ್ (Dhanush) ಹಾಡಿದ ‘ಕೊಲವೆರಿ ಡಿ’ ಸಾಂಗ್ ನನ್ನ ಚಿತ್ರವನ್ನೇ ನುಂಗಿ ಹಾಕಿತ್ತು ಎಂದು ಐಶ್ವರ್ಯ ಮಾತನಾಡಿದ್ದಾರೆ. ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಪುತ್ರನ ಜೊತೆ ಪ್ರೇಮಿಗಳ ದಿನಕ್ಕೂ ಮುನ್ನ ಸಾನ್ಯಾ ಫೋಟೋಶೂಟ್
ಐಶ್ವರ್ಯ ರಜನಿಕಾಂತ್ (Rajanikanth) ನಿರ್ದೇಶನದಲ್ಲಿ ‘ತ್ರಿ’ ಸಿನಿಮಾ ಮೂಡಿ ಬಂದಿತ್ತು. ಧನುಷ್ ಮತ್ತು ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಐಶ್ವರ್ಯ ಪ್ರತಿಕ್ರಿಯಿಸಿ, ‘ತ್ರಿ’ ಚಿತ್ರ ಪ್ರಯೋಗಾತ್ಮಕ ಸಿನಿಮಾವಾಗಿತ್ತು. ‘ಕೊಲವೆರಿ ಡಿ’ ಸೂಪರ್ ಹಿಟ್ ಆಗಿತ್ತು. ಆದರೆ ಅದರಿಂದ ಸಿನಿಮಾಗೆ ತೊಂದರೆಯಾಯ್ತು ಎಂದಿದ್ದಾರೆ. ಧನುಷ್ ಹಾಡಿದ ಹಾಡಿನಿಂದ ಸಿನಿಮಾಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಹಾಡು ನನ್ನ ಸಿನಿಮಾವನ್ನೇ ನುಂಗಿ ಹಾಕಿತ್ತು. ಹಾಗಾಗಿ ನನಗೆ ನಷ್ಟವಾಯ್ತು ಎಂದು ಮಾತನಾಡಿದ್ದಾರೆ.
‘ಕೊಲವೆರಿ ಡಿ’ ಹಾಡು ಹಿಟ್ ಆದ್ಮೇಲೆ ಜನರ ನಿರೀಕ್ಷೆ ಹೆಚ್ಚಾಯ್ತು. ನನ್ನ ಕಥೆಗೆ ಪ್ರಾಮುಖ್ಯತೆ ಇರುವ ಸಿನಿಮಾ ಮಾಡಿದೆ. ನಾನು ಹೇಳಲು ಪ್ರಯತ್ನಿಸಿದ ಕಥೆ ಪ್ರೇಕ್ಷಕರನ್ನು ತಲುಪಲಿಲ್ಲ. ಅದರಿಂದ ನನ್ನ ಸಿನಿಮಾಗೆ ಪೆಟ್ಟಾಯ್ತು ಎಂದು ಮಾಜಿ ಪತಿ ಹಾಡಿದ ಹಾಡಿನ ಬಗ್ಗೆ ಐಶ್ವರ್ಯ ಅಸಮಾಧಾನ ಹೊರಹಾಕಿದ್ದಾರೆ.
ಫೆ.9ರಂದು ‘ಲಾಲ್ ಸಲಾಂ’ ಸಿನಿಮಾ ರಿಲೀಸ್ ಆಗಿತ್ತು. ಅತಿಥಿ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದರು. ಚಿತ್ರಕ್ಕೆ ಐಶ್ವರ್ಯ ರಜನಿಕಾಂತ್ ಆ್ಯಕ್ಷನ್ ಕಟ್ ಹೇಳಿದ್ದರು. ಆದರೆ ‘ಲಾಲ್ ಸಲಾಂ’ ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ‘ಲಾಲ್ ಸಲಾಂ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತ ಬೆನ್ನಲ್ಲೇ ಐಶ್ವರ್ಯ, ಧನುಷ್ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
2004ರಲ್ಲಿ ಧನುಷ್ ಮತ್ತು ಐಶ್ವರ್ಯ ಮದುವೆಯಾಗಿದ್ದರು. 2022ರಲ್ಲಿ ಡಿವೋರ್ಸ್ ಕುರಿತು ಐಶ್ವರ್ಯ-ಧನುಷ್ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ತಿಳಿಸಿದ್ದರು. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.