ತಮಿಳು ನಟ, ನಿರ್ದೇಶಕ ಮಾರಿಮುತ್ತು (Marimuthu) ಇಂದು ಬೆಳಿಗ್ಗೆ (ಸೆ.8) ಹೃದಯಾಘಾತದಿಂದ ನಿಧನರಾಗಿದ್ದಾರೆ. ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದ ಮಾರಿಮುತ್ತು ವಿಧಿವಶರಾಗಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ರಿಷಬ್ ಶೆಟ್ಟಿ- ಐತಿಹಾಸಿಕ ಪಾತ್ರದಲ್ಲಿ ಕಾಂತಾರ ಶಿವ
ಸಿನಿಮಾವೊಂದರ ಡಬ್ಬಿಂಗ್ ಮಾಡುವಾಗ ಇಂದು ಬೆಳಿಗ್ಗೆ 8:30ಕ್ಕೆ ಹೃದಯಾಘಾತ(Heart Attack) ಸಂಭವಿಸಿದೆ. ಸ್ಥಳದಲ್ಲಿಯೇ ನಟ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 56 ವರ್ಷದ ಹಿರಿಯ ನಟ ಮಾರಿಮುತ್ತು ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.
ಮಾರಿಮುತ್ತು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಸಾಕಷ್ಟು ಸೀರಿಯಲ್, ಮತ್ತು ಸಿನಿಮಾಗಳಲ್ಲಿ ಮಾರಿಮುತ್ತು ನಟಿಸಿದ್ದರು. ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇತ್ತೀಚಿನ ಜೈಲರ್ ಸಿನಿಮಾದಲ್ಲಿ ಮಾರಿಮುತ್ತು ನಟಿಸಿದ ಪಾತ್ರ ಜನಮನ್ನಣೆ ಪಡೆದಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]