Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

Karnataka

ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

Public TV
Last updated: August 14, 2025 3:44 pm
Public TV
Share
2 Min Read
Rahul Gandhi 3
SHARE

ನವದೆಹಲಿ: ಬಿಹಾರದಲ್ಲಿ (Bihar) ಆಗಸ್ಟ್ 17ರಿಂದ ಆರಂಭಗೊಳ್ಳುವ ‘ಮತದಾರ ಅಧಿಕಾರ ಯಾತ್ರೆ’ ಮೂಲಕ ದೇಶವ್ಯಾಪಿ ‘ಮತದಾನ ಕಳ್ಳತನ’ ವಿರುದ್ಧ ನೇರ ಹೋರಾಟಕ್ಕೆ ಇಳಿಯುವುದಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಘೋಷಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಇದು ಕೇವಲ ಚುನಾವಣೆಯ ವಿಷಯವಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ. ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಶುದ್ಧೀಕರಣವೇ ಈ ಅಭಿಯಾನದ ಪ್ರಮುಖ ಗುರಿ. ಯುವಕರು, ಕಾರ್ಮಿಕರು, ರೈತರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರೀಕನು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಬಿಹಾರದ ಮಣ್ಣಿನಿಂದ ಪ್ರಾರಂಭವಾಗುವ ಈ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ‍್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ‘ಈ ಬಾರಿ, ಮತ ಕಳ್ಳರ ಸೋಲು ಜನರ ಮತ್ತು ಸಂವಿಧಾನದ ಗೆಲುವು’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

Rahul Gandhi

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಮತದಾನ ಹಕ್ಕು ಕಸಿಯುತ್ತಿರುವ ಸಂವಿಧಾನ ವಿರೋಧಿ ನಡೆಯ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರು ರಾಜ್ಯಾದ್ಯಂತ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಚಶೋತಿಯಲ್ಲಿ ಮೇಘಸ್ಫೋಟ – ದಿಢೀರ್‌ ಪ್ರವಾಹಕ್ಕೆ 10 ಸಾವು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಳ ಸಭೆಯ ನಂತರ, ಮೂರು ಹಂತಗಳ ವಿಶೇಷ ಅಭಿಯಾನವನ್ನು ಘೋಷಿಸಲಾಗಿದೆ. ಅದರಂತೆ ಆಗಸ್ಟ್ 14ರಂದು ಎಲ್ಲಾ ಜಿಲ್ಲೆಗಳಲ್ಲಿ ‘ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆ’ ನಡೆಯಲಿದೆ. ಆಗಸ್ಟ್ 22ರಿಂದ ಸೆಪ್ಟೆಂಬರ್ 7ರವರೆಗೆ ರಾಜ್ಯ ಕೇಂದ್ರ ಕಚೇರಿಗಳಲ್ಲಿ ‘ವೋಟ್ ಚೋರ್, ಗಡ್ಡಿ ಚೋರ್’ ರ‍್ಯಾಲಿಗಳು ನಡೆಯಲಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಮತದಾನ ಹಕ್ಕು ರಕ್ಷಣೆಗೆ ದೇಶವ್ಯಾಪಿ ಸಹಿ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಎನ್‌ಎಸ್‌ಯುಐ ಉಸ್ತುವಾರಿ ಕನಯ್ಯಾ ಕುಮಾರ್ ವಿವರಿಸಿದರು. ಇದನ್ನೂ ಓದಿ: ರಾಜಣ್ಣ ವಜಾ ಹೈಕಮಾಂಡ್ ತೀರ್ಮಾನ, ಇದರಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ: ಇಕ್ಬಾಲ್ ಹುಸೇನ್

ಕಳೆದ ವಾರ, ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಪ್ರಸ್ತುತ, ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಈ ವಿಷಯದ ಮೇಲೆ ಚರ್ಚೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಮತದಾರರ ಹಕ್ಕು ಕಸಿಯುತ್ತಿವೆ ಎಂದು ಆರೋಪಿಸುತ್ತಿವೆ. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

TAGGED:Bihar Voter RollscongressNew DelhiRahul GandhiVoter Listಕಾಂಗ್ರೆಸ್ನವದೆಹಲಿಬಿಹಾರ್ಮತಗಳ್ಳತನರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

PRAJWAL REVANNA
Bengaluru City

70 ಪೆನ್‌ ಡ್ರೈವ್‌ ಬಳಕೆ – ಆಪ್ತ ವ್ಯಕ್ತಿಗಳಿಂದಲೇ ಪ್ರಜ್ವಲ್‌ ರೇವಣ್ಣಗೆ ಖೆಡ್ಡಾ

Public TV
By Public TV
5 minutes ago
Flight Seat
Latest

ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ವಿಮಾನದ ಶೇ.60ರಷ್ಟು ಸೀಟುಗಳ ಆಯ್ಕೆ ಫ್ರೀ

Public TV
By Public TV
21 minutes ago
UPSC Rank Bihar Youth Arrest
Chikkaballapur

ಕನ್ನಡಿಗ ಪಡೆದಿದ್ದ ರ‍್ಯಾಂಕ್‌ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್

Public TV
By Public TV
23 minutes ago
PRAJWAL REVANNA 1
Bengaluru City

ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Public TV
By Public TV
28 minutes ago
hailstorm in bengaluru weekend holiday traffic jams many roads in bengaluru ugadi ramzan
Bengaluru City

ಸಾಲು ಸಾಲು ರಜೆ ಊರಿಗೆ ಹೊರಡುವಾಗಲೇ ಆಲಿಕಲ್ಲು ಮಳೆ – ಬೆಂಗಳೂರಿನ ಹಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

Public TV
By Public TV
55 minutes ago
ಸಾಂದರ್ಭಿಕ ಚಿತ್ರ
Bellary

ಕೊಲ್ಲಿ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ಜೀನ್ಸ್ ಉದ್ಯಮ – 20 ಲಕ್ಷ ಪ್ರಾಡಕ್ಟ್‌ಗಳ ರಫ್ತು ಸ್ಥಗಿತ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?