ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಔತಣಕೂಟಗಳ ಮೂಲಕ ರಾಜ್ಯದ ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ವಿಧನಾಸಭೆಯ ಅಧಿವೇಶನ ಆರಂಭವಾದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದರು. ಈ ಔತಣಕೂಟಗಳು ರಾಜಕೀಯ ನಾಯಕರುಗಳ ಶಕ್ತಿ ಪ್ರದರ್ಶನದ ಅಸ್ತ್ರವಾಗಿಯೇ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಅದರಂತೆ ಕಳೆದ ರಾತ್ರಿ ಡಿಸಿಎಂ ಪರಮೇಶ್ವರ್ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಶಾಸಕರಿಗೆ ಪರಿಷತ್ ಸದಸ್ಯರಿಗೆ ಔತಣಕೂಟ ಏರ್ಪಡಿಸಿದರು. ಇದನ್ನೂ ಓದಿ: ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!
Advertisement
ಈ ಔತಣ ಕೂಟಕ್ಕೆ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಯಮಾಲಾ, ಕೃಷ್ಣ ಭೈರೇಗೌಡ, ಜಾರ್ಜ್, ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಶಾಸಕರುಗಳು ಮತ್ತು ಪರಿಷತ್ ಸದಸ್ಯರು ಭಾಗಿಯಾಗಿದ್ರು. ಆದರೆ ನಾಳೆ ಸಿಎಂ ಕುಮಾರಸ್ವಾಮಿಯವರು ಎರಡು ಸದನದ ಸದಸ್ಯರಿಗೆ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಮಧ್ಯಾಹ್ನ ಭೋಜನ ಕೂಟ ಏರ್ಪಡಿಸಿದ್ದಾರೆ.
Advertisement
ಸಿಎಂ ಭೋಜನಕೂಟ ಏರ್ಪಡಿಸಿರುವುದು ವಿಧಾನಸಭೆಯ ಅಧಿವೇಶನ ಕಡೆಯ ದಿನಾ ಎಂಬ ಕಾರಣಕ್ಕೋ ಅಥವಾ ಸಮ್ಮಿಶ್ರ ಸರ್ಕಾರದ ಸೌಹರ್ದತೆಯನ್ನು ತೋರಿಸಲಿಕ್ಕೋ ಎಂಬ ಪ್ರಶ್ನೆ ಮೂಡುತ್ತಿದ್ದು ಔತಣಕೂಟದಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬುದು ಮಾತ್ರ ಕಾದು ನೋಡಬೇಕಿದೆ.