ಬೆಂಗಳೂರು: ಸಚಿವರಿಗಾಗಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಡಿನ್ನರ್ ಕೂಟ ಏರ್ಪಾಡು ಮಾಡಿದ್ದಾರೆ. ಸಂಸದ ಡಿ.ಕೆ.ಸುರೇಶ್ (D.K.Suresh) ಅವರ ಸದಾಶಿವನಗರದ ನಿವಾಸದಲ್ಲಿ ಇಂದು ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ಸಚಿವರಿಗೆ ಭೋಜನ ಕೂಟಕ್ಕೆ ಡಿಕೆಶಿ ಆಹ್ವಾನ ಕೊಟ್ಟಿದ್ದಾರೆ. ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ಸಚಿವರಿಗೆ ಔತಣಕೂಟ ಏರ್ಪಾಡು ಮಾಡಿದಲಾಗಿದೆ. ಇದೇ ವೇಳೆ ಪ್ರಸಕ್ತ ರಾಜಕೀಯ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: HDK ಅಫಿಡವಿಟ್, ಅಶೋಕ್ ರೈಟಿಂಗ್‌ನಲ್ಲಿ ಕೊಡ್ಲಿ- ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ಟಾಂಗ್
Advertisement
Advertisement
ಪೆನ್‌ಡ್ರೈವ್ ಪ್ರಕರಣ, ಲೋಕಸಭಾ ಚುನಾವಣೆ ಕಾರ್ಯವೈಖರಿ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ ಇದ್ದು, ಸಿಎಂ-ಡಿಸಿಎಂ ಭೋಜನ ಕೂಟ ಮಹತ್ವ ಪಡೆದುಕೊಂಡಿದೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಇವತ್ತು ಸಂಜೆ ಸಚಿವರ ಜೊತೆ ಸಭೆ ಇದೆ. ಊಟಕ್ಕೆ ಸೇರುತ್ತಿದ್ದೇವೆ. ಪರಿಷತ್ ಚುನಾವಣೆ ಇದೆ. ಲೋಕಲ್ ಬಾಡಿ ಎಲೆಕ್ಷನ್ ಬಗ್ಗೆ ಚರ್ಚೆ ಮಾಡ್ತೀವಿ. ಲೋಕಸಭೆ ಚುನಾವಣೆ ಹೇಗೆ ಮಾಡಿದ್ವಿ ಅನ್ನೋದನ್ನ ಚರ್ಚೆ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿಯೇ ಪೆನ್‍ಡ್ರೈವ್ ಟ್ರಾನ್ಸ್‌ಫರ್: ಹೆಚ್‍ಡಿಕೆ ಹೊಸ ಬಾಂಬ್
Advertisement
ಇದೇ ವೇಳೆ ಲೋಕಸಭೆ ಟಾಸ್ಕ್ ಪೂರೈಸದ ಸಚಿವರ ತಲೆದಂಡ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅದನ್ನೆಲ್ಲ ನಿಮ್ಮ ಮುಂದೆ ಹೇಳಿ ಮಾಡ್ತೀವಾ ಎಂದು ನಕ್ಕು ಡಿಕೆಶಿ ತೆರಳಿದರು.