ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ 17ನೇ ಆವೃತ್ತಿ ಐಪಿಎಲ್ ಎಲಿಮಿನೇಟರ್ ಪಂದ್ಯವೇ ಡಿಕೆ ಪಾಲಿಗೆ ಕೊನೆಯದ್ದಾಗಿದೆ. ಆರ್‌ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ದಿನೇಶ್ ಕಾರ್ತಿಕ್ ಭಾವುಕ ವಿದಾಯ ಹೇಳಿದ್ದಾರೆ.
DINESH KARTHIK, A LEGEND FOREVER.
– Thank you for the happy memories, DK. pic.twitter.com/KsuBnLRiuH
— Mufaddal Vohra (@mufaddal_vohra) May 22, 2024
Advertisement
ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ತೆಗೆದು ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಅರ್ಪಿಸಿದ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಆಟಗಾರರಿಂದ ಭಾವನಾತ್ಮಕ ಗೌರವ ಪಡೆದುಕೊಂಡಿದ್ದಾರೆ. ಎದುರಾಳಿ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲೂ ಡಿಕೆ ತೀವ್ರ ಭಾವುಕರಾಗಿದ್ದು ಕಂಡುಬಂದಿತ್ತು. ಮೈದಾನ ತೊರೆಯುವವರೆಗೂ ದಿನೇಶ್ ಕಾರ್ತಿಕ್ ಅವರ ಕಣ್ಣಲ್ಲಿ ನೀರು ತುಂಬಿತ್ತು. ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಬೀಳ್ಕೊಡುಗೆ ನೀಡಿದರು. ಆದ್ರೆ ದಿನೇಶ್ ಕಾರ್ತಿಕ್ ಅಧಿಕೃತವಾಗಿ ಘೋಷಣೆ ಹೊರಡಿಸುವುದೊಂದೇ ಬಾಕಿಯಿದೆ.
Advertisement
Dinesh Karthik getting guard of honour from RCB and the crowd chanting ‘DK, DK’.
– The most emotional video. 🥹💔 pic.twitter.com/XZ3WmbO5Ne
— Mufaddal Vohra (@mufaddal_vohra) May 22, 2024
Advertisement
ದಿನೇಶ್ ಕಾರ್ತಿಕ್ ಟೂರ್ನಿ ಆರಂಭದಲ್ಲೇ ಇದು ತಮ್ಮ ಕೊನೆಯ ಐಪಿಎಲ್ (IPL 2024) ಎಂಬ ಸುಳಿವು ನೀಡಿದ್ದರು. ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತ ನಂತರ ಮಾತನಾಡಿದ್ದ ಡಿಕೆ, ಆರ್‌ಸಿಬಿ ಪ್ಲೇಆಫ್ ತಲುಪಿದರೆ ಆಗ ಕೊನೆಯ ಪಂದ್ಯವಾಗುತ್ತದೆ ಎಂದು ಹೇಳಿದ್ದರು. 38 ವರ್ಷದ ಡಿಕೆ ಈಗ ಕೊನೆಗೂ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ
Advertisement
Streets will never forget this knock of Dinesh Karthik.
Thank you for everything, DK. ⭐ pic.twitter.com/0648PfGAAT
— Mufaddal Vohra (@mufaddal_vohra) May 22, 2024
ಡಿಕೆ ಐಪಿಎಲ್ ವೃತ್ತಿ ಜೀವನ ಹೇಗಿದೆ?
17 ವರ್ಷಗಳ ಐಪಿಎಲ್ನಲ್ಲಿ ಹಲವು ತಂಡಗಳ ಪರ ಆಡಿರುವ ದಿನೇಶ್ ಕಾರ್ತಿಕ್, ತಮ್ಮ ಐಪಿಎಲ್ ವೃತ್ತಿಜೀವನ ಪೂರ್ಣಗೊಳಿಸಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದ ದಿನೇಶ್ ಕಾರ್ತಿಕ್, 2011ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪಾಲಾದರು. 2012 ಮತ್ತು 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಡಿಕೆ, 2014ರಲ್ಲಿ ಮತ್ತೆ ಡೆಲ್ಲಿ ತಂಡ ಪ್ರತಿನಿಧಿಸಿದ್ದರು. 2015ರಲ್ಲಿ ಆರ್‌ಸಿಬಿ ಪರ ಆಡಿದ್ದ ದಿನೇಶ್ ಕಾರ್ತಿಕ್ 2016, 2017ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ದರು. ಬಳಿಕ 2021ರ ವರೆಗೆ ಕೆಕೆಆರ್ ತಂಡದಲ್ಲಿದ್ದ ದಿನೇಶ್ ಕಾರ್ತಿಕ್ 2022ರಲ್ಲಿ ಮತ್ತೆ ಆರ್‌ಸಿಬಿ ತಂಡಕ್ಕೆ ಎಂಟ್ರಿಕೊಟ್ಟರು. ಈವರೆಗೆ ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ 973 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!
ಐಪಿಎಲ್ ವೃತ್ತಿ ಬದುಕಿನಲ್ಲಿ ದಿನೇಶ್ ಕಾರ್ತಿಕ್ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿವಿಧ ಟೀಂಗಳಲ್ಲಿ ಆಡಿದ ಅನುಭವ ಹೊಂದಿರುವ ದಿನೇಶ್ ಕಾರ್ತಿ 257 ಪಂದ್ಯಗಳು ಹಾಗೂ 234 ಇನ್ನಿಂಗ್ಸ್‌ಗಳನ್ನಾಡಿ 4,842 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕ, 466 ಬೌಂಡರಿಗಳು ಹಾಗೂ 161 ಸಿಕ್ಸರ್‌ಗಳೂ ಸೇರಿವೆ. ವೈಯಕ್ತಿಕ ಗರಿಷ್ಠ ಸ್ಕೋರ್ 97 ರನ್ ಆಗಿದೆ. ಆರ್‌ಸಿಬಿ ಪರ ಆಡಿ ಫಿನಿಶರ್ ಖ್ಯಾತಿಯನ್ನೂ ದಿನೇಶ್ ಕಾರ್ತಿಕ್ ಪಡೆದಿದ್ದರು, ಆದರೂ ಆರ್‌ಸಿಬಿ ಕಪ್ ಗೆಲ್ಲಲಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಖಾಸಗಿ ಸಂಭಾಷಣೆ ಪ್ರಸಾರ ಮಾಡಿದ್ದಕ್ಕೆ ಐಪಿಎಲ್ ಪ್ರಸಾರಕರಿಗೆ ರೋಹಿತ್ ಶರ್ಮಾ ತರಾಟೆ