ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಲಿ, ಅಮಿತ್ ಶಾ ಸಿಂಹ ಅಂತ ಹೇಳಿಕೆ ನೀಡಿರೋ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹುಲಿ ಸಂರಕ್ಷಣಾ ಯೋಜನೆ ಜಾರಿಯಲ್ಲಿದೆ. ಬಂಡೀಪುರ, ನಾಗರಹೊಳೆ, ದಾಂಡೇಲಿ, ಬನ್ನೇರುಘಟ್ಟ, ಎಲ್ಲಾ ಕಡೆ ಬೇಕಾದಷ್ಟು ಕಾಡಿದೆ. ಮೋದಿ ಅಮಿತ್ ಶಾ ಬಂದು ಎಲ್ಲಿ ಬೇಕಾದ್ರೂ ಅರಾಮಾಗಿ ಓಡಾಡಲಿ ಅಂತ ಹೇಳಿದ್ದಾರೆ.
Advertisement
Advertisement
ಅಮಿತ್ ಶಾ ಭಾಷಣದಲ್ಲಿ ಹೊಸ ಅಂಶ ಏನಿಲ್ಲ. ಮಹದಾಯಿ ವಿಚಾರದ ಬಗ್ಗೆ ಮಾತನಾಡಿಲ್ಲ. ಭಾಷಣದಲ್ಲಿ ಹೇಳಿದ ಸುಳ್ಳುಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಬರುವ ಬದಲು ಹಳೇ ಆಡಿಯೋ ಪ್ಲೇ ಮಾಡಿದ್ದರೆ ಸಾಕಿತ್ತು ಎಂದು ಹೇಳಿ ಟಾಂಗ್ ನೀಡಿದ್ದರು.
Advertisement
ಮೈಸೂರಿನಲ್ಲಿ ಮುಕ್ತಾಯಗೊಂಡ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮುಗಿಸಿ ನಿರ್ಗಮಿಸಿದ ನಂತರ ಮಾತನಾಡಿದ ಈಶ್ವರಪ್ಪ, ಈಗ ಹುಲಿ (ಶಾ) ಘರ್ಜಿಸಿ ಹೋಯಿತು. ಫೆ.4ಕ್ಕೆ ಸಿಂಹ (ಮೋದಿ) ಬರುತ್ತದೆ, ಪರಿಣಾಮ ಸಿದ್ದರಾಮಯ್ಯ ಇಲಿ ಆಗುತ್ತಾರೆ ಎಂದು ಹೇಳಿದ್ದರು.