ಬೆಂಗಳೂರು: ಜಡ್ಜ್ ಮೇಲೆ ಒತ್ತಡ ಹಾಕಿ 2 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರ ನಡೆದಿದೆ. ಕಾನೂನಾತ್ಮಕವಾಗಿ ಹೋರಾಟವನ್ನ ಮಾಡುತ್ತೇವೆ. ಬಿಜೆಪಿಯವರು ಅವಹೇಳನಕಾರಿ ಭಾಷಣ ಮಾಡಿಲ್ವಾ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಚುನಾವಣೆ ಮೇಲೆ ಇದು ಪರಿಣಾಮ ಬಿರುತ್ತೆ. ಬಿಜೆಪಿ (BJP) ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ದೇಶದಾದ್ಯಂತ ಪ್ರತಿಭಟನೆಗಳನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ
Advertisement
Advertisement
ಬಿಜೆಪಿಯವರಿಗೆ ಯಾವುದೇ ಭಯವಿಲ್ಲ. ಸರ್ವಾಧಿಕಾರಕ್ಕಿಂತ ಕ್ರೂರ ಮಟ್ಟಕ್ಕೆ ಹೋಗಿದೆ. ರಾಹುಲ್ ಗಾಂಧಿಯನ್ನ ಅನರ್ಹ ಮಾಡಿ, ಬಾಯಿ ಮುಚ್ಚಿಸಬಹುದು ಅಂದುಕೊಂಡಿದ್ದಾರೆ. ಮೋದಿ ಅವಹೇಳನಕಾರಿಯಾಗಿ ಮಾತಾಡಿರಲಿಲ್ವಾ..? ಗಾಂಧಿ ಸರ್ ನೇಮ್ ನೆಹರು ಯಾಕೆ ಇಟ್ಕೊಂಡಿದ್ರು ಎಂದು ಕೇಳಿದ್ದರು. ಪ್ರಧಾನಿಯಾಗಿ ಮೋದಿ (Narendra Modi) ಹೇಳಿದ್ದು ಹಾಗಾದ್ರೆ ಸರಿಯಾ?. ರಾಹುಲ್ ಗಾಂಧಿ (Rahul Gandhi) ಕರ್ನಾಟಕದಲ್ಲೇ ಭಾಷಣ ಮಾಡಿರುವಾಗ ಹೇಳಿದ್ದು ಎಂದರು.
Advertisement
ಎಲ್ಲಾ ಕಳ್ಳರಿಗೂ ಮೋದಿ ಸರ್ ನೇಮ್ ಯಾಕಿರುತ್ತೆ ಎಂದಿದ್ದರು. ಆ ಸಮಯದಲ್ಲಿ ನೀರವ್ ಮೋದಿ, ಲಲಿತ್ ಮೋದಿ ಹಗರಣಗಳಿದ್ದವು. ಆ ಕಾರಣಕ್ಕಾಗಿ ಮಾತಿನ ಭರದಲ್ಲಿ ಹೇಳಿದ್ದರು. ಕಾಂಗ್ರೆಸ್‍ನವರು ಈ ಪ್ರಕರಣದಿಂದ ಧೃತಿಗೆಡಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.