ಬೆಂಗಳೂರು: ಬೇರೆ ಕಾರಣಗಳಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಹೆಸರು ಇಲ್ಲ ಯಾಕೆ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ಬೇರೆ ಕಾರಣಗಳಿಂದಾಗಿ ಅವರು ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಅವರ ಆದೇಶದ ಹಿನ್ನೆಲೆಯಲ್ಲಿ ಹೆಸರನ್ನು ಮುದ್ರಿಸಿಲ್ಲ. ಒಂದು ವೇಳೆ ಹೆಸರನ್ನು ಮುದ್ರಿಸಿ ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಅದ್ದಕ್ಕೆ ಕಥೆ ಕಟ್ಟಿ ನೀವು ದೊಡ್ಡ ಸುದ್ದಿ ಮಾಡುತ್ತೀರಿ. ಹೀಗಾಗಿ ಅವರೇ ಹೇಳಿದ್ದಕ್ಕೆ ಹೆಸರು ಮುದ್ರಿಸಿಲ್ಲ ಎಂದು ಉತ್ತರಿಸಿದರು.
Advertisement
ಅಧಿಕಾರ ಹೋಗುತ್ತೆ ಎನ್ನುವ ಭಯಕ್ಕೆ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಭಾಗವಹಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಪ್ರಶ್ನೆಗೆ, ಅಧಿಕಾರ ಹೇಗೆ ಹೋಗುತ್ತದೆ? ಈ ಬಾರಿಯ ಉಪಚುನಾವಣೆಯಲ್ಲಿ ನಾವು ಗೆದ್ದಿಲ್ಲವೇ. ಹೀಗಾಗಿ ನಮಗೆ ಭಯ ಯಾಕೆ ಎಂದು ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರಶ್ನೆ ಕೇಳಿದರು.
Advertisement
Advertisement
ಭಾರೀ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದು, ಇದೀಗ ಆಚರಣೆಗೂ ಸರ್ಕಾರ ರೆಡಿಯಾಗಿದೆ. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಹೆಸರು ಇಲ್ಲದಿರುವುದು ಇದೀಗ ಅನುಮಾನ ಎದ್ದಿದೆ.
Advertisement
ಕೇವಲ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಟಿಪ್ಪು ಜಯಂತಿ ಸೀಮಿತವೇ ಎಂಬ ಪ್ರಶ್ನೆಯೊಂದು ಎದ್ದಿದ್ದು, ಮುಖ್ಯಮಂತ್ರಿಯವರು ಟಿಪ್ಪು ಜಯಂತಿ ಆಚರಣೆಯಿಂದ ದೂರ ಉಳಿದುಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಯಾಕಂದ್ರೆ ಟಿಪ್ಪು ಜಯಂತಿ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಹೆಸರು ಇಲ್ಲ. ಈ ಮೂಲಕ ಕಾಂಗ್ರೆಸ್ ಸರ್ಕಾರ ಘೋಷಿಸಿದ ವಿವಾದಾತ್ಮಕ ಜಯಂತಿಯಿಂದ ಸಿಎಂ ದೂರ ಉಳಿದ್ರಾ ಎಂಬಂತಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಕಾಂಗ್ರೆಸ್ ಸಚಿವರು, ಶಾಸಕರದ್ದೇ ದರ್ಬಾರ್ ಆಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಹೆಸರು ಬಿಟ್ಟರೆ ಜೆಡಿಎಸ್ ನವರು ಹೆಸರಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಟಿಪ್ಪು ಜಯಂತಿ ಆಚರಣೆ ಬಗ್ಗೆ ಟೀಕಿಸಿದ್ದ ಕುಮಾರಸ್ವಾಮಿ, ಈಗಲೂ ಅದೇ ನಿಲುವುವನ್ನ ಕಾಯ್ದುಕೊಂಡಿದ್ದಾರಾ. ಗೆಳೆಯ ಜಮೀರ್ ಅಹಮದ್ ಮನವೊಲಿಕೆಗೂ ಸಿಎಂ ಅವರು ಕ್ಯಾರೇ ಅಂತಿಲ್ಲವಾ. ಹಾಗಾದ್ರೆ ಸಮ್ಮಿಶ್ರ ಸರ್ಕಾರ ವಿವಾದಾತ್ಮಕ ನಿರ್ಧಾರಕ್ಕೆ ಹೆಚ್ ಡಿಕೆ ಸೈಲೆಂಟ್ ಆಗಿಬಿಟ್ಟರಾ ಅನ್ನೋ ಪ್ರಶ್ನೆ ಮೇಲೆ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews