ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು(Greater Bengaluru) ಸ್ಥಾಪನೆ ಮಾಡಲಾಗ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್(dinesh Gundu Rao) ತಿಳಿಸಿದರು.
ಗುರುವಾರದಿಂದ ಗ್ರೇಟರ್ ಬೆಂಗಳೂರು ಅಸ್ಥಿತ್ವಕ್ಕೆ ಬರುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಹಳ ದಿನಗಳಿಂದ ಗ್ರೇಟರ್ ಬೆಂಗಳೂರು ಚರ್ಚೆ ಆಗುತ್ತಿತ್ತು. ಜಿಬಿಎಗೆ ನಮ್ಮ ಸರ್ಕಾರ ಕಾಯಕಲ್ಪ ಕೊಟ್ಟು, ಅಧಿವೇಶನದಲ್ಲಿ ಚರ್ಚೆ ಆಗಿದೆ. ಸಮಿತಿ ಆಗಿ ಬಿಲ್ ಪಾಸ್ ಆಗಿ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈಗ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ವಿಶ್ವದರ್ಜೆ ನಗರ. ಬೆಂಗಳೂರು(Bengaluru) ಆಡಳಿತವನ್ನ ಸುಧಾರಣೆ ಮಾಡಬೇಕು ಹೀಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಮಾಡಲಾಗ್ತಿದೆ ಎಂದರು. ಇದನ್ನೂ ಓದಿ: ಉಗ್ರ ಮಸೂದ್ ಅಜರ್‌ಗೆ 14 ಕೋಟಿ ರೂ. ಪರಿಹಾರ ಘೋಷಿಸಿದ ಪಾಕಿಸ್ತಾನ
ಬಿಬಿಎಂಪಿ(BBMP) ಆಡಳಿತ ಜನರ ಹತ್ತಿರ ಇರುವ ಆಡಳಿತ ಆಗಿರಲಿಲ್ಲ. ಯೋಜನೆ ಸೃಷ್ಟಿ ಮಾಡೋದ್ರಲ್ಲಿ ಗೊಂದಲ ಆಗ್ತಿತ್ತು. ಈಗ ರಾಜ್ಯ ಸರ್ಕಾರದ ಪಾತ್ರ ಜಾಸ್ತಿ ಆಗಲಿದೆ. ಸಿಎಂ ಅವರು ಅಧ್ಯಕ್ಷರು ಇರುತ್ತಾರೆ. ಎಲ್ಲಾ ಇಲಾಖೆಗಳು ಕೆಲಸ ಮಾಡುತ್ತವೆ. ಗುರಿ ಇಟ್ಟುಕೊಂಡು ಕೆಲಸ ಮಾಡಲು ಇದು ಸಹಾಯಕಾರಿ. ಯಾವುದು 100% ಸರಿ ಆಗುವುದಿಲ್ಲ. ಆದರೆ ಅಭಿವೃದ್ಧಿ ಅಗಬೇಕು. 3,5,7 ಎಷ್ಟು ಪಾಲಿಕೆ ಅಂತ ಗೊತ್ತಿಲ್ಲ. ಚರ್ಚೆ ಬಳಿಕ ಇದು ತೀರ್ಮಾನ ಆಗುತ್ತದೆ. ಬೆಂಗಳೂರು ಅಭಿವೃದ್ಧಿ ಆಗಬೇಕು. ಹೀಗಾಗಿ ಗ್ರೇಟರ್ ಬೆಂಗಳೂರು ಅಸ್ಥಿತ್ವಕ್ಕೆ ಬರುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಜೈಶಂಕರ್, ಜೆ.ಪಿ ನಡ್ಡಾ ಸೇರಿ 25 ಪ್ರಮುಖರಿಗೆ ಭದ್ರತೆ ಹೆಚ್ಚಳ
ಬಿಬಿಎಂಪಿಗೆ ಚುನಾವಣೆ(BBMP Election) ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗ ಗ್ರೇಟರ್ ಬೆಂಗಳೂರು ಆಗಿದೆ. ಕೋರ್ಟ್ಗೂ ಇದನ್ನ ಹೇಳಿದ್ದೇವೆ. ಆದಷ್ಟು ಬೇಗ ಚುನಾವಣೆ ಆಗಬೇಕು. ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು. ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ಸಿಎಂ ಸಚಿವರಿಗೆ ಹೇಳಿದ್ದಾರೆ. ಬೆಂಗಳೂರು ಚುನಾವಣೆ ಕೂಡಾ ಆಗುತ್ತದೆ. ಇಷ್ಟು ವರ್ಷ ಚುನಾವಣೆ ಆಗದೇ ಇರೋದು ಸರಿಯಲ್ಲ ಎಂದರು.