ಬೆಂಗಳೂರು: ಇಡೀ ದೇಶವನ್ನು ಕೇಸರಿಕರಣಗೊಳಿಸುವ ವ್ಯವಸ್ಥಿತ ಹುನ್ನಾರವೊಂದು ಆರ್‌ಎಸ್‍ಎಸ್ ಪಡಸಾಲೆಯಲ್ಲಿ ನಡೆಯುತ್ತಿದೆ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಸಚಿವ ಈಶ್ವರಪ್ಪ ಹೇಳಿಕೆ ಸಂವಿಧಾನ ವಿರೋಧಿ ನಡೆಯ ಜೊತೆಗೆ ರಾಷ್ಟ್ರದ್ರೋಹವು ಹೌದು. ಈಶ್ವರಪ್ಪ ಆರ್‌ಎಸ್‍ಎಸ್ ಕಾರ್ಯತಂತ್ರವನ್ನು ತಪ್ಪಿ ಬಾಯಿಬಿಟ್ಟಿದ್ದಾರೆ. ಧ್ವಜ ವಿವಾದ ಆರ್‌ಎಸ್‍ಎಸ್ ಕಾರ್ಯಸೂಚಿಯ ಒಂದು ಭಾಗ. ನಾಜಿ ಸಂತತಿಯ ಅನ್‍ಡಿಟೆಡ್ ವರ್ಷನ್ ಆಗಿರುವ ಆರ್‌ಎಸ್‍ಎಸ್ ಪ್ರಾರಂಭದಿಂದಲೂ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು
Advertisement
Advertisement
ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಆರ್‌ಎಸ್‍ಎಸ್‍ಗೆ ಆಗಲೂ ಇರಲಿಲ್ಲ. ಈಗಲೂ ಇಲ್ಲ. ತ್ರಿವರ್ಣ ಧ್ವಜದ ಬದಲು ಭಾಗಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಮಾಡುವ ಹಿಡನ್ ಅಜೆಂಡಾ ಆರ್‌ಎಸ್‍ಎಸ್‍ನದ್ದು. ಆರ್‌ಎಸ್‍ಎಸ್‍ನ ಈ ಅಜೆಂಡಾವೇ ಈಶ್ವರಪ್ಪ ಬಾಯಿಂದ ಹೊರಬಂದಿದೆಯಷ್ಟೇ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್
Advertisement
3
BJP ನಾಯಕರಿಗೆ ಸಂವಿಧಾನ ಹಾಗೂ ರಾಷ್ಟ್ರಧ್ವಜದ ಮೇಲೆ ನಿಜವಾದ ಗೌರವವಿದ್ದರೆ ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಬೇಕು.
ಜೊತೆಗೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು.
ಇಲ್ಲದೇ ಹೋದರೆ ರಾಷ್ಟ್ರದ್ರೋಹಿ ಈಶ್ವರಪ್ಪ ಮತ್ತು ಅವರ ಬೆಂಬಲಿತ ಬಿಜೆಪಿ ವಿರುದ್ಧ ನಮ್ಮ ಹೋರಾಟ ಉಗ್ರವಾಗಲಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 17, 2022
Advertisement
ಬಿಜೆಪಿ ನಾಯಕರಿಗೆ ಸಂವಿಧಾನ ಹಾಗೂ ರಾಷ್ಟ್ರಧ್ವಜದ ಮೇಲೆ ನಿಜವಾದ ಗೌರವವಿದ್ದರೆ ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಬೇಕು. ಜೊತೆಗೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದೇ ಹೋದರೆ ರಾಷ್ಟ್ರದ್ರೋಹಿ ಈಶ್ವರಪ್ಪ ಮತ್ತು ಅವರ ಬೆಂಬಲಿತ ಬಿಜೆಪಿ ವಿರುದ್ಧ ನಮ್ಮ ಹೋರಾಟ ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್